ಬೆಂಗಳೂರು, ಮೇ.11 (DaijiworldNews/PY): "ಕೋವಿಡ್ ಸೋಂಕಿನಿಂದ ಪಾಲಕರನ್ನು ಕಳೆದುಕೊಂಡು ಅನಾಥರಾದ ಮಕ್ಕಳ ಪಾಲನೆಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಪ್ರತ್ಯೇಕ ಕ್ವಾರಂಟೈನ್ ಕೇಂದ್ರ ಆರಂಭಿಸಿದೆ" ಎಂದು ಬಿಜೆಪಿ ತಿಳಿಸಿದೆ.
ಸಾಂದರ್ಭಿಕ ಚಿತ್ರ
ಈ ಬಗ್ಗೆ ಟ್ವೀಟ್ ಮಾಡಿರುವ ಬಿಜೆಪಿ, "ಕೋವಿಡ್ ಸೋಂಕಿನಿಂದ ಪಾಲಕರನ್ನು ಕಳೆದುಕೊಂಡು ಅನಾಥರಾದ ಮಕ್ಕಳ ಪಾಲನೆಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಪ್ರತ್ಯೇಕ ಕ್ವಾರಂಟೈನ್ ಕೇಂದ್ರ ಆರಂಭಿಸಿದೆ. 993 ಕೇಂದ್ರಗಳಲ್ಲಿ 7069 ಮಕ್ಕಳು ಆಶ್ರಯ ಪಡೆದಿದ್ದಾರೆ. ಗಂಡು - ಹೆಣ್ಣು ಮಕ್ಕಳಿಗೆ ಪ್ರತ್ಯೇಕವಾಗಿ ಆಶ್ರಯ ಕಲ್ಪಿಸಲಾಗುವುದು" ಎಂದು ಹೇಳಿದೆ.
"ಪ್ರತಿ ಜಿಲ್ಲೆಯಲ್ಲೂ ಕ್ವಾರಂಟೈನ್ ಕೇಂದ್ರ ಸ್ಥಾಪನೆ. ಮಾಹಿತಿಗಾಗಿ 1098 / 14499 ಕ್ಕೆ ಕರೆಮಾಡಿ. ಕೋವಿಡ್ ವಿರುದ್ಧದ ಹೋರಾಟವನ್ನು ಬಲಪಡಿಸುತ್ತಿದೆ ಬಿಎಸ್ವೈ ಸರ್ಕಾರ" ಎಂದಿದೆ.
"ಕೋವಿಡ್ ಸೋಂಕಿತರಿಗಾಗಿ ರಾಜ್ಯ ಸರ್ಕಾರ ಬೆಂಗಳೂರು ಕೃಷಿ ವಿವಿ ಜಿಕೆವಿಕೆ ಆವರಣದಲ್ಲಿ ಕೋವಿಡ್ ಆರೈಕೆ ಕೇಂದ್ರ ಆರಂಭಿಸಿದೆ. ಈ ಕೇಂದ್ರ 350 ಹಾಸಿಗೆ ಸಾಮರ್ಥ್ಯ ಹೊಂದಿರಲಿದೆ. ವೈದ್ಯಕೀಯ ಸಿಬ್ಬಂದಿಗಾಗಿ 30 ಹಾಸಿಗೆ ಸಾಮರ್ಥ್ಯದ ಸ್ಟಾಫ್ ಕ್ವಾಟ್ರರ್ಸ್ ಸೌಲಭ್ಯವಿರಲಿದೆ. 24 ಗಂಟೆ ಸೇವೆ ಲಭ್ಯವಿರಲಿದೆ" ಎಂದು ತಿಳಿಸಿದೆ.