ನವದೆಹಲಿ, ಮೇ.11 (DaijiworldNews/PY): ಪೆಟ್ರೋಲ್ ಹಾಗೂ ಡಿಸೇಲ್ ದರದಲ್ಲಿ ಮಂಗಳವಾರವೂ ಏರಿಕೆ ಕಂಡಿದ್ದು, ಪೆಟ್ರೋಲ್ ಪ್ರತೀ ಲೀಟರ್ ಬೆಲೆ 25 ರಿಂದ 27 ಪೈಸೆ ಹಾಗೂ ಪ್ರತೀ ಲೀಟರ್ ಡಿಸೇಲ್ ದರ 33 ಪೈಸೆಗೆ ಏರಿಕೆಯಾಗಿದೆ.
ದೆಹಲಿಯಲ್ಲಿ ಮಂಗಳವಾರ ಪ್ರತೀ ಲೀಟರ್ ಪೆಟ್ರೋಲ್ ಬೆಲೆ 91.8 ರೂ. ಹಾಗೂ ಡಿಸೇಲ್ ಪ್ರತೀ ಲೀಟರ್ಗೆ 82.36 ರೂ. ಏರಿಕೆ ಕಂಡಿದೆ. ಮುಂಬೈಯಲ್ಲಿ ಪೆಟ್ರೋಲ್ ದರ 98.12 ರೂ., ಪ್ರತೀ ಲೀಟರ್ ಡಿಸೇಲ್ ದರ 89.48 ರೂ. ನಷ್ಟಿದೆ. ಇನ್ನು ರಾಜಸ್ಥಾನ ಹಾಗೂ ಮಧ್ಯಪ್ರದೇಶಗಳಲ್ಲಿ ಪೆಟ್ರೋಲ್ ದರ 100 ರೂ. ಗಡಿ ದಾಟಿದೆ.
"ಮಾರುಕಟ್ಟೆಯಲ್ಲಿ ನಷ್ಟವನ್ನು ಸರಿಪಡಿಸಲು ಪ್ರತೀ ಲೀಟರ್ ಪೆಟ್ರೋಲ್ ದರ 5 ರೂ ಹಾಗೂ ಪ್ರತೀ ಲೀಟರ್ ಡಿಸೇಲ್ ಬೆಲೆ 3 ರೂ. ಏರಿಕೆ ಮಾಡುವುದು ಅನಿವಾರ್ಯ" ಎಂದು ತೈಲ ಕಂಪೆನಿಗಳಿ ತಿಳಿಸಿವೆ.
ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಏರಿಕೆ ಕಂಡಿದ್ದು, ದರ ಪರಿಷ್ಕರಣೆ ಮಾಡದಿರುವ ಕಾರಣ ಇಂಡಿಯನ್ ಆಯಿಲ್, ಭಾರತ್ ಪೆಟ್ರೋಲಿಯಂ ಹಾಗೂ ಹಿಂದೂಸ್ತಾನ್ ಪೆಟ್ರೋಲಿಯಂ ನಷ್ಟ ಅನುಭವಿಸಿವೆ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ ಕೊಂಚ ಕುಸಿತ ಕಂಡಿದ್ದು, ಪ್ರತಿ ಬ್ಯಾರೆಲ್ಗೆ 67.87ಯುಎಸ್ ಡಾಲರ್ನಷ್ಟಿದೆ.
ನವದೆಹಲಿಯಲ್ಲಿ ಪೆಟ್ರೋಲ್ ಬೆಲೆ 91.80 ರೂ, ಇದ್ದರೆ, ಡಿಸೇಲ್ ಬೆಲೆ 82.36 ರೂ. ನಷ್ಟಿದೆ. ಕೋಲ್ಕತ್ತಾದಲ್ಲಿ ಪೆಟ್ರೋಲ್ ಬೆಲೆ 98.12 ರೂ., ಡೀಸೆಲ್ ಬೆಲೆ 89.48 ರೂ. ನಷ್ಟಿದೆ. ಮುಂಬೈಯಲ್ಲಿ ಪೆಟ್ರೋಲ್ ಬೆಲೆ 98.12 ರೂ., ಡಿಸೇಲ್ ಬೆಲೆ 89.48 ರೂ. ಇದೆ. ಚೆನ್ನೈನಲ್ಲಿ ಪೆಟ್ರೋಲ್ ದರ 93.62 ರೂ. ಇದ್ದರೆ. ಡಿಸೇಲ್ ಬೆಲೆ 87.25 ರೂ. ನಷ್ಟಿದೆ. ಬೆಂಗಳೂರಿನಲ್ಲಿ ಪೆಟ್ರೋಲ್ ದರ 94.85 ರೂ. ಇದ್ದರೆ, ಡೀಸೆಲ್ ಬೆಲೆ 87.31 ರೂ. ನಷ್ಟಿದೆ.
ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆಯಲ್ಲಿ ಏರಿಳಿತ ಹಾಗೂ ಡಾಲರ್ ರೂಪಾಯಿ ವಿನಿಮಯ ದರದ ಆಧಾರದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಳಿತ ಕಾಣುತ್ತಿದೆ.