ತಿರುವನಂತಪುರಂ, ಮೇ.11 (DaijiworldNews/HR): ಹಿರಿಯ ಕಮ್ಯುನಿಸ್ಟ್ ನಾಯಕಿ ಹಾಗೂ ಜನಾದಿಪತ್ಯ ಸಂರಕ್ಷಣಾ ಸಮಿತಿ ಮುಖಂಯಾಗಿದ್ದ ಕೆ ಆರ್ ಗೌರಿ(101) ಇಂದು ನಿಧನರಾಗಿದ್ದಾರೆ.
ಕೆ ಆರ್ ಗೌರಿ ಅವರು ವಯೋಸಹಜ ಕಾಯಿಲೆಯಿಂದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದ್ದು, ಇಂದು ಬೆಳಿಗ್ಗೆ 7 ಗಂಟೆಗೆ ಕೊನೆಯುಸಿರೆಳೆದಿದ್ದಾರೆ.
ಕೇರಳದ ಇತಿಹಾಸದಲ್ಲಿ ಪ್ರಸಿದ್ಧ ರಾಜಕೀಯ ನಾಯಕಿಯಾಗಿದ್ದ ಗೌರಿ ಅತೀ ಹೆಚ್ಚಿನ ಅವಧಿಗೆ ಸಚಿವರಾಗಿ ಕಾರ್ಯನಿರ್ವಹಿಸಿದ್ದು, ವಿಧಾನಸಭೆಗೆ 10 ಬಾರಿ ಚುನಾಯಿತರಾಗಿ ಆರು ವಿವಿಧ ಸರ್ಕಾರಗಳ ಅವಧಿಯಲ್ಲಿ 16 ವರ್ಷಗಳ ಕಾಲ ಸಚಿವರಾಗಿದ್ದರು.
ಇನ್ನು ಗೌರಿ ಅವರು ಜೆಎಸ್ಎಸ್ ಎಂಬ ಹೊಸ ರಾಜಕೀಯ ಪಕ್ಷವನ್ನು ಸ್ಥಾಪಿಸಿ 2016 ರ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಪಕ್ಷದ ಸೋಲಿನಿಂದಾಗಿ ಯುಡಿಎಫ್ ಜೊತೆಗಿನ ಸಂಬಂಧವನ್ನು ಕಡಿದುಕೊಂಡು ಬಳಿಕ ಅವರ ಪಕ್ಷವು ಎಲ್ಡಿಎಫ್ ನೊಂದಿಗೆ ಕೈಜೋಡಿಸಿದ್ದರು.