ಆಂಧ್ರಪ್ರದೇಶ, ಮೇ 11(DaijiworldNews/MS): ಇಡೀ ವಿಶ್ವವನ್ನೇ ಕಂಗೆಡಿಸಿದ್ದ ಕೊರೊನಾ ಸಾಂಕ್ರಮಿಕ ರೋಗ, ಭಾರತದಲ್ಲಿ ತನ್ನ ರುದ್ರನರ್ತನ ಆರಂಭಿಸಿದೆ. ಸೋಂಕು ಹರಡದಂತೆ ಕಡಿವಾಣ ಹಾಕಲು ತಜ್ಞರು ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ. ಮಾತ್ರವಲ್ಲ ಹಲವು ರಾಜ್ಯದಲ್ಲಿ ಲಾಕ್ ಡೌನ್ ಘೋಷಿಸಲಾಗಿದೆ.
ಇದೆಲ್ಲದರ ಮಧ್ಯೆ ಕೊರೊನಾ ಕಾಯಿಲೆಯ ಹೆಸರನ್ನೇ ಬದಲಾಯಿಸಿದರೆ ಆ ಕಾಯಿಲೆಯಿಂದ ಮುಕ್ತವಾಗಬಹುದು ಎಂಬ ಪುಕ್ಸಟೆ ಸಲಹೆಯನ್ನು ಸಂಖ್ಯಾ ಶಾಸ್ತಜ್ಞರೊಬ್ಬರು ನೀಡಿದ್ದಾರೆ. ಈ ವಿಚಾರ ಅಂತರ್ಜಾಲದಲ್ಲಿ ನೆಟ್ಟಿಗರನ್ನು ರಂಜಿಸಿದ್ದು ವೈರಲ್ ಆಗಿದೆ.
ಈ ಶಾಸ್ತ್ರಜ್ಞನ ಹೆಸರು ಎಸ್ ವಿ. ಆನಂದ್ ರಾವ್ . ಆಂದ್ರದ ಅನಂತಪುರದ್ ಕೋರ್ಟ್ ನಲ್ಲಿ ಸ್ಟೇನೋಗ್ರಾಫರ್ ಆಗಿ ಕೆಲಸ ಮಾಡುತ್ತಿದ್ದಾರೆ. ಇವರು ತಮ್ಮ ಹೆಸರಿನ ಇಂಗ್ಲೀಷ್ ಸ್ಪೆಲ್ಲಿಂಗ್ ನಲ್ಲಿ ಒಂದು ಎನ್ ಅಕ್ಷರವನ್ನು ಹಾಗೂ ಒಂದು ಡಿ ಅಕ್ಷರವನ್ನು ಹೆಚ್ಚುವರಿಗೆ ಸೇರಿಸಿಕೊಂಡು ಅದೃಷ್ಟವಂತರಾಗಿದ್ದಾರಂತೆ. ಹೀಗಾಗಿ ಕರೋನಾ' ಮತ್ತು ಕೊವೀಡ್ -19 ರ ಕಾಗುಣಿತವನ್ನು ಬದಲಾಯಿಸಿಬೇಕು ಎಂದು ಹೇಳಿದ್ದಾರೆ.
ಹಾಗಾಗಿ ಕೊರೊನಾ ಹೆಸರನ್ನು coronaa ಅಥವಾ covviyd-19 ಎಂದು ಬದಲಾಯಿಸಿ ಮನೆಗಳ ಬಾಗಿಲಲ್ಲಿ ಬರೆಯಬೇಕು ಅಥವಾ ಬಡವಾಣೆ ಸಾರ್ವಜನಿಕ ಪ್ರದೇಶಗಳಲ್ಲಿ ಬ್ಯಾನರ್ ಕಟ್ಟಬೇಕು ಹಾಗೆ ಮಾಡಿದರೆ ಈ ದೇಶ ಕೊರೊನಾದಿಂದ ಪಾರಾಗಬಲ್ಲದು ಎಂದು ಹೇಳಿದ್ದಾರೆ . ಟ್ವಿಟರ್ ನಲ್ಲಿ ಈ ಬಗ್ಗೆ ಪರ ವಿರೋಧ ಚರ್ಚೆಗಳು ನಡೆದಿದ್ದು, ನೆಟ್ಟಿಗರನ್ನು ರಂಜಿಸಿದೆ.