ಬೆಂಗಳೂರು, ಮೇ. 10 (DaijiworldNews/HR): ಕನ್ನಡ ಚಿತ್ರರಂಗದ ಹಿರಿಯ ಹಾಸ್ಯ ನಟ ರಾಜಾರಾಂ(82) ಅವರು ಇಂದು ನಿಧನರಾಗಿದ್ದಾರೆ ಎಂದು ತಿಳಿದು ಬಂದಿದೆ.
ಕನ್ನಡದ ಹಿರಿಯ ಕಲಾವಿದ ರಾಜಾರಾಂ ಅವರು ಸಿನಿಮಾ, ರಂಗಭೂಮಿ ಸೇರಿದಂತೆ ವಿವಿಧ ಕ್ಷೇತ್ರದಲ್ಲಿ ನಟರಾಗಿ ಗುರ್ತಿಸಿಕೊಂಡಿದ್ದು, ಇಂದು ನಿಧನರಾಗಿದ್ದಾರೆ.
ರಂಗಭೂಮಿಯ ಪ್ರಖ್ಯಾತ ಕಲಾವಿದರಾದ ರಾಜಾರಾಂರವರು 1938ರಲ್ಲಿ ಕೋಲಾರ ಜಿಲ್ಲೆಯ ಕೆ.ಜಿ.ಎಫ್ ನಲ್ಲಿ ಹುಟ್ಟಿದ್ದು, ತಂದೆ ಜಿ.ಎಸ್. ರಘುನಾಥರಾವ್, ತಾಯಿ ಶಾರದಾಬಾಯಿ. ಕರ್ನಾಟಕ ಸರ್ಕಾರದ ಸಚಿವಾಲಯದಲ್ಲಿ ಉದ್ಯೋಗಕ್ಕೆ ಸೇರಿ ಅಧೀನ ಕಾರ್ಯದರ್ಶಿ ಹುದ್ದೆಗೇರಿ ನಿವೃತ್ತಿ. ಮಲ್ಲೇಶ್ವರದ ಸ್ನೇಹಿತರೊಡನೆ ಸೇರಿ ಕಟ್ಟಿದ 'ರಸಿಕ ರಂಜನಿ ಕಲಾವಿದರು' ಸಂಸ್ಥಾಪಕರಲ್ಲೊಬ್ಬರು.
ಇನ್ನು ರಾಜಾರಾಂ ಅವರಿಗೆ ಅತ್ತಿಮಬ್ಬೆ ಪ್ರತಿಷ್ಠಾನ ಪ್ರಶಸ್ತಿ, ಮಯೂರ ಕಲಾರಂಗ, ಕರ್ನಾಟಕ ನಾಟಕ ಅಕಾಡೆಮಿ ಮುಂತಾದುವುಗಳಿಂದ ಗೌರವ ಪ್ರಶಸ್ತಿ ಲಭಿಸಿದೆ.