ಕೊಳ್ಳೇಗಾಲ, ಮೇ 10 (DaijiworldNews/MB) : ಕೊರೊನಾ ದೃಢಪಟ್ಟ ವೃದ್ಧೆಯೊಬ್ಬರು ತನ್ನಿಂದ ಕುಟುಂಬದವರಿಗೆ ಸೋಂಕು ಹರಡಬಹುದೆಂದು ಭಯಗೊಂಡು ಘಟನೆ ತಾಲೂಕಿನ ಇಕ್ಕಡಹಳ್ಳಿ ಗ್ರಾಮದಲ್ಲಿ ನಡೆದಿದೆ.
ಮೃತ ವೃದ್ದೆಯನ್ನು ಸಿದ್ದಮ್ಮ(70) ಎಂದು ಗುರುತಿಸಲಾಗಿದೆ.
ಮೇ1 ರಂದು ವೃದ್ದೆಗೆ ಜ್ವರ ಕಾಣಿಸಿಕೊಂಡಿದ್ದು ಮೇ.3 ರಂದು ಕೊರೊನಾ ಸೋಂಕು ದೃಢಪಟ್ಟಿದೆ. ಬಳಿಕ ವೈದ್ಯರ ಸಲಹೆಯಂತೆ ವೃದ್ದೆ ಹೋಂ ಕ್ವಾರಂಟೈನ್ ಆಗಿದ್ದು ಸೋಮವಾರ ವೃದ್ಧೆಯ ಕೊಠಡಿಗೆ ಕಾಫಿ ನೀಡಲು ಹೋದಾಗ ಅವರು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ತನ್ನ ಕುಟುಂಬಕ್ಕೂ ಕೊರೊನಾ ಸೋಂಕು ಹರಡಬಹುದು ಎಂದು ಭಯಗೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಮೃತ ವೃದ್ದನ ಪುತ್ರ ಸೀಗನಾಯಕ ಈ ಬಗ್ಗೆ ಪ್ರತಿಕ್ರಿಯೆ ನೀಡಿ, ಕೊರೊನಾ ಬಂದ ಕಾರಣ ನನ್ನ ತಾಯಿ ಜಿಗುಪ್ಸೆಗೆ ಒಳಗಾಗಿದ್ದರು ಎಂದು ಹೇಳಿದ್ದಾರೆ.
ಇನ್ನು ಈ ವಿಚಾರ ತಿಳಿದ ಪೊಲೀಸರು ಸ್ಥಳಕ್ಕೆ ಧಾವಿಸಿದ್ದು ಕೊರೊನಾ ನಿಯಮಾವಳಿಯಂತೆ ಅಂತ್ಯಕ್ರಿಯೆ ನಡೆಸಲಾಗಿದೆ.
ಯಾವುದೇ ಸಮಸ್ಯೆಗೆ ಆತ್ಮಹತ್ಯೆ ಪರಿಹಾರವಲ್ಲ. ನೀವು ಯಾವುದೇ ತೊಂದರೆಯಲ್ಲಿದ್ದರೆ ದಯವಿಟ್ಟು ಮಾನಸಿಕ ಆರೋಗ್ಯ ತಜ್ಞರ ಸಹಾಯ ಪಡೆಯಿರಿ. ಸಹಾಯವಾಣಿ ಸಂಖ್ಯೆ – 9152987821