ತಿರುವನಂತಪುರಂ, ಮೇ. 10 (DaijiworldNews/HR): ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದಾರೆ, ಈಗಾಗಲೇ ನಮ್ಮಲ್ಲಿ ತುರ್ತು ಸಂಗ್ರಹವಾಗಿದ್ದ ಆಕ್ಸಿಜನ್ ಅನ್ನು ನೆರೆಯ ರಾಜ್ಯಗಳಿಗೆ ಪೂರೈಸಿದ್ದು, ಈಗ ಕೇವಲ ನಮ್ಮಲ್ಲಿ 86 ಮೆಟ್ರಿಕ್ ಟನ್ ಆಕ್ಸಿಜನ್ ಉಳಿದಿದೆ ಎಂದು ತಿಳಿಸಿದ್ದಾರೆ.
ಆಕ್ಸಿಜನ್ ಹಂಚಿಕೆಗೆ ಕೇಂದ್ರ ಸಮಿತಿಯ ಮೇ 6 ರ ತೀರ್ಪಿನ ಪ್ರಕಾರ, ರಾಜ್ಯವು ಮೇ 10 ರವರೆಗೆ 40 ಮೆಟ್ರಿಕ್ ಟನ್ ಆಮ್ಲಜನಕವನ್ನು ತಮಿಳುನಾಡಿಗೆ ಕಳುಹಿಸಲಾಗಿದ್ದು, ಆದಾಗ್ಯೂ, ಪ್ರಸ್ತುತ ಪರಿಸ್ಥಿತಿಯನ್ನು ಪರಿಗಣಿಸಿ ಆಮ್ಲಜನಕವನ್ನು ಬೇರೆ ರಾಜ್ಯಕ್ಕೆ ಕಳುಹಿಸುವುದು ಅಸಾಧ್ಯ" ಎಂದಿದ್ದಾರೆ.
ಕೇರಳದಲ್ಲಿ ಪ್ರಸ್ತುತ 4,02,640 ಸಕ್ರಿಯ ಪ್ರಕರಣಗಳಿದ್ದು, ಮೇ 15 ರ ವೇಳೆಗೆ ಈ ಸಂಖ್ಯೆ 6,00,000 ಕ್ಕೆ ಏರಿಕೆಯಾಗುವ ನಿರೀಕ್ಷೆಯಿದೆ. ವೇಗವಾಗಿ ಕೊರೊನಾ ಹರಡುತ್ತಿರುವುದರಿಂದ ಮೇ 15 ರ ವೇಳೆಗೆ ರಾಜ್ಯಕ್ಕೆ 450 ಮೆಟ್ರಿಕ್ ಟನ್ ಆಮ್ಲಜನಕ ಬೇಕಾಗುತ್ತದೆ.
ರಾಜ್ಯದ ಪ್ರಮುಖ ಆಮ್ಲಜನಕ ಉತ್ಪಾದನಾ ಘಟಕವೆಂದರೆ ಐನಾಕ್ಸ್, ಇದು ಪಾಲಕ್ಕಾಡ್ನ ಕಾಂಜಿಕೋಡ್ನಲ್ಲಿದೆ. ಇದರ ಒಟ್ಟು ಉತ್ಪಾದನಾ ಸಾಮರ್ಥ್ಯ 150 ಮೆಟ್ರಿಕ್ ಟನ್ ಮತ್ತು ಇತರ ಸಣ್ಣ ಘಟಕಗಳೊಂದಿಗೆ ರಾಜ್ಯವು ಪ್ರತಿದಿನ 219 ಮೆಟ್ರಿಕ್ ಟನ್ ಆಮ್ಲಜನಕವನ್ನು ಉತ್ಪಾದಿಸುತ್ತಿದೆ ಎಂದರು.
ಇನ್ನು ರಾಜ್ಯವು ಭೌಗೋಳಿಕವಾಗಿ ಮುಖ್ಯ ಉಕ್ಕಿನ ಸ್ಥಾವರಗಳಿಂದ ದೂರವಿರುವುದರಿಂದ, ಆಮ್ಲಜನಕದ ವರ್ಗಾವಣೆಯನ್ನು ಕಷ್ಟಕರವಾಗಿಸುತ್ತದೆ, "ರಾಜ್ಯದಲ್ಲಿ ಉತ್ಪತ್ತಿಯಾಗುವ ಸಂಪೂರ್ಣ ಆಮ್ಲಜನಕವನ್ನು ಅಂದರೆ 219 ಮೆ.ಟನ್ ಅನ್ನು ಕೇರಳ ರಾಜ್ಯಕ್ಕೆ ಹಂಚಿಕೆ ಮಾಡಬೇಕೆಂದು ನಾನು ವಿನಂತಿಸುತ್ತೇನೆ" ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ಹೆಚ್ಚಿನ ಪ್ರಮಾಣದ ವೈದ್ಯಕೀಯ ಆಮ್ಲಜನಕವನ್ನು ವರ್ಗಾಯಿಸಲು ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು ಮತ್ತು ಕೇರಳಕ್ಕೆ ಆಕ್ಸಿಜನ್ ಎಕ್ಸ್ಪ್ರೆಸ್ ರೈಲುಗಳನ್ನು ಓಡಿಸುವ ಮೂಲಕ ಹೆಚ್ಚಿನ ಕ್ರೈಯೊಜೆನಿಕ್ ಟ್ಯಾಂಕರ್ಗಳನ್ನು ಹಂಚಿಕೆ ಮಾಡುವಂತೆ ಕೇಂದ್ರವನ್ನು ಕೋರಿದ್ದಾರೆ.