ಚಾಮರಾಜನಗರ, ಮೇ. 10 (DaijiworldNews/HR): ಚಾಮರಾಜನಗರದ ತಾಲೂಕಿನ ಕೊತ್ತಲವಾಡಿ ಗ್ರಾಮದಲ್ಲಿ ಕೊರೊನಾ ಸೋಂಕಿಗೆ ಪತಿ, ಪತ್ನಿ ಇಬ್ಬರೂ ಮೃತಪಟ್ಟಿರುವ ಘಟನೆ ನಡೆದಿದ್ದು, ಅವರ 5 ವರ್ಷದ ಮಗು ಅನಾಥವಾಗಿದೆ.
ಮೃತಪಟ್ಟವರನ್ನು ಆಟೋ ಚಾಲಕರಾಗಿದ್ದ ಗುರುಪ್ರಸಾದ್ (35) ಅವರ ಪತ್ನಿ ರಶ್ಮಿ (30) ಎಂದು ಗುರುತಿಸಲಾಗಿದೆ.
10 ದಿನಗಳ ಹಿಂದೆ ಗುರುಪ್ರಸಾದ್ಗೆ ಕೊರೊನಾ ಸೋಂಕು ತಗುಲಿದ್ದು, ಜಿಲ್ಲಾ ಕೊರೊನಾ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಿಸದೇ ನಾಲ್ಕೂ ದಿನಗಳ ಹಿಂದೆ ಮೃತಪಟ್ಟವರು. ಅವರ ಪತ್ನಿ ರಶ್ಮಿಗೂ ಸೋಂಕು ತಗುಲಿ ಹೋಂ ಐಸೋಲೇಷನ್ ಆಗಿದ್ದು, ಅವರು ರವಿವಾರ ಉಸಿರಾಟದ ಸಮಸ್ಯೆಯಾಗಿ ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಇನ್ನು ಇಬ್ಬರಿಗೂ ಕೊರೊನಾ ದೃಢಪಟ್ಟ ಹಿನ್ನಲೆಯಲ್ಲಿ ಮಗುವನ್ನು ರಶ್ಮಿ ತಂಗಿಯ ಮನೆಯಲ್ಲಿ ಇರಿಸಿದ್ದರು. ರಶ್ಮಿ ಹೋಂ ಐಸೋಲೇಷನ್ನಲ್ಲಿದ್ದರಿಂದ ಅವರ ತಂದೆ ತಾಯಿ ಕೊತ್ತಲವಾಡಿಯ ಮಗಳ ಮನೆಗೆ ಬಂದು ಆರೈಕೆ ಮಾಡುತ್ತಿದ್ದರು.