ನವದೆಹಲಿ, ಮೇ. 10 (DaijiworldNews/HR): "ಕೊರೊನಾ ಲಸಿಕೆಯು ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಒಂದು ಕೋಟಿ ಡೋಸ್ಗಳಷ್ಟು ದಾಸ್ತಾನಿದ್ದು, ಮುಂದಿನ ಮೂರು ದಿನಗಳಲ್ಲಿ ಇನ್ನೂ 9 ಲಕ್ಷ ಡೋಸ್ಗಳಷ್ಟು ಲಸಿಕೆಯನ್ನು ಹೆಚ್ಚುವರಿಯಾಗಿ ಪೂರೈಸಲಾಗುವುದು" ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ.
ಸಾಂಧರ್ಭಿಕ ಚಿತ್ರ
ಕೇಂದ್ರ ಸರ್ಕಾರವು ಇಲ್ಲಿವರೆಗೆ ಸುಮಾರು 18 ಕೋಟಿ ಡೋಸ್ಗಳಷ್ಟು ಲಸಿಕೆಯನ್ನು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಉಚಿತವಾಗಿ ನೀಡಿದೆ.
ಇನ್ನು ಇದರಲ್ಲಿ ವ್ಯರ್ಥವಾಗಿರುವ ಲಸಿಕೆಗಳು ಸೇರಿ ಒಟ್ಟು 16,89,27,797 ಡೋಸ್ಗಳಷ್ಟು ಲಸಿಕೆ ಬಳಕೆಯಾಗಿದೆ ಎಂದು ಸಚಿವಾಲಯವು ಮಾಹಿತಿ ನೀಡಿದೆ.
ದೇಶದಲ್ಲಿ ಕೊರೊನಾ ಸೋಂಕು ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಕಳೆದ 24 ಗಂಟೆಗಳಲ್ಲಿ 3,66,161 ಹೊಸ ಕೊರೊನಾ ಸೋಂಕು ಪ್ರಕರಣಗಳು ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ 2,26,62,575 ಕ್ಕೆ ಏರಿಕೆಯಾಗಿದೆ.