ನವದೆಹಲಿ, ಮೇ. 10 (DaijiworldNews/HR): ದೇಶದಾದ್ಯಂತ ಕೊರೊನಾ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದ್ದು, ದೆಹಲಿಯ ಸರೋಜ್ ಆಸ್ಪತ್ರೆಯ ಸುಮಾರು 80 ವೈದ್ಯರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಹಿರಿಯ ಶಸ್ತ್ರಚಿಕಿತ್ಸಕರೊಬ್ಬರು ಕೊರೊನಾಗೆ ಬಲಿಯಾಗಿದ್ದಾರೆ.
ಕೊರೊನಾದಿಂದ ಬಳಲುತ್ತಿರುವ 80 ವೈದ್ಯರಲ್ಲಿ 12 ವೈದ್ಯರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಉಳಿದವರು ಹೋಮ್ ಕ್ವಾರಂಟೈನ್ ನಲ್ಲಿದ್ದಾರೆ ಎಂದು ತಿಳಿದು ಬಂದಿದೆ.
ಆಸ್ಪತ್ರೆಯ ಹಿರಿಯ ಶಸ್ತ್ರಚಿಕಿತ್ಸಕ ಡಾ. ಎ.ಕೆ.ರಾವತ್ ಅವರು ಕೊರೊನಾಗೆ ನಿಧನರಾಗಿದ್ದು,ಡಾ. ಎ.ಕೆ.ರಾವತ್ ಅವರು ಸರೋಜ್ ಆಸ್ಪತ್ರೆಯಲ್ಲಿ 27 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ.
ಸರೋಜ್ ಆಸ್ಪತ್ರೆಯಲ್ಲಿ ಕೊರೊನಾ ಹರಡುವಿಕೆಯೊಂದಿಗೆ, ಎಲ್ಲಾ ಹೊರ ರೋಗಿ ವಿಭಾಗಗಳನ್ನು (ಒಪಿಡಿಗಳು) ಸದ್ಯಕ್ಕೆ ಮುಚ್ಚಲಾಗಿದೆ ಎಂದು ವರದಿಯಾಗಿದೆ.
ರವಿವಾರ ದೆಹಲಿಯಲ್ಲಿ 273 ಕೊರೊನಾದಿಂದ ಮೃತಪಟ್ಟಿದ್ದು, 13,336 ಹೊಸ ಪ್ರಕರಣಗಳು ವರದಿಯಾಗಿವೆ.