ಚಿಕ್ಕಮಗಳೂರು, ಮೇ 10 (DaijiworldNews/MS): "ತನ್ನಿಂದಾಗಿ ಮನೆ ಮಂದಿಗೆ ಕೊರೊನಾ ಹರಡುವುದು ಬೇಡ "ವೆಂದು ನಿವೃತ್ತ ಉಪ ತಹಶೀಲ್ದಾರ್ ರೊಬ್ಬರು ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ತರೀಕೆರೆ ಯಲ್ಲಿ ಸೋಮವಾರ ನಡೆದಿದೆ. ಮೃತರನ್ನು ತರಿಕೇರಿಯ ಬೇಲೇನಹಳ್ಳಿ ಬಳಿಯ ಸೋಮ್ಲ ನಾಯ್ಕ್(68)ಎಂದು ಗುರುತಿಸಲಾಗಿದೆ.
ಇವರು ತಮ್ಮ ತೋಟದ ಬಳಿ ಕಾರಿನಲ್ಲಿ ಬಂದೂಕಿನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಾರಿನಲ್ಲಿ ದೊರಕಿರುವ ಡೆತ್ ನೋಟ್ ನಲ್ಲಿ " ತನ್ನಿಂದ ಕುಟುಂಬದವರಿಗೆ ಕೋವಿಡ್ ಹರಡಬಾರದು ಎಂದು ಆತ್ಮಹತ್ಯೆ ಮಾಡಿಕೊಂಡಿದ್ದೇನೆ" ಎಂದು ಬರೆದುಕೊಂಡಿದ್ದಾರೆ.
ಸೋಮ್ಲನಾಯ್ಕ್ ಅವರು ಇದೇ ಮೇ 7ರಂದು ಕೋವಿಡ್ ಪರೀಕ್ಷೆಗೆ ಮಾದರಿ ನೀಡಿದ್ದರು. 9ರಂದು ವರದಿ ಬಂದಿತ್ತು, ಅವರಿಗೆ ಕೋವಿಡ್ ದೃಢಪಟ್ಟಿತ್ತು. ಸ್ಥಳಕ್ಕೆ ತರೀಕೆರೆ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.