ಬೆಂಗಳೂರು, ಮೇ 09 (DaijiworldNews/SM): ರಾಜ್ಯದಲ್ಲಿ ರವಿವಾರದಂದು ಹೊಸದಾಗಿ 47930 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ಆ ಮೂಲಕ ಇಲ್ಲಿಯ ತನಕ ಪತ್ತೆಯಾದ ಒಟ್ಟು ಸೋಂಕಿತರ ಸಂಖ್ಯೆ 19,34,378ಕ್ಕೆ ಏರಿಕೆಯಾಗಿದೆ.
ರವಿವಾರದಂದು ರಾಜ್ಯದಲ್ಲಿ 31796 ಮಂದಿ ಗುಣಮುಖರಾಗಿ ಬಿಡುಗಡೆಗೊಂಡಿದ್ದಾರೆ. ಆ ಮೂಲಕ ಜಿಲ್ಲೆಯಲ್ಲಿ ಒಟ್ಟು ಗುಣಮುಖರಾದವರ ಸಂಖ್ಯೆ 13,51,097ಕ್ಕೆ ಏರಿಕೆಯಾಗಿದೆ. ಪ್ರಸ್ತುತ ರಾಜ್ಯದಲ್ಲಿ 5,64,485 ಮಂದಿ ಪ್ರಸ್ತುತ ಚಿಕ್ತಿಸೆ ಪಡೆಯುತ್ತಿದ್ದಾರೆ. 490 ಮಂದಿ ರವಿವಾರದಂದು ಸೋಂಕಿಗೆ ಬಲಿಯಾಗಿದ್ದು, ಇಲ್ಲಿಯ ತನಕ 18,776 ಮಂದಿ ಸೋಂಕಿಗೆ ಬಲಿಯಾದಂತಾಗಿದೆ.
ರವಿವಾರವೂ ಕೂಡ ಅತ್ಯಧಿಕ ಸೋಂಕಿತ ಪ್ರಕರಣಗಳು ಬೆಂಗಳೂರು ನಗರದಲ್ಲೇ ಪತ್ತೆಯಾಗಿದ್ದು, 20897 ಮಂದಿಯಲ್ಲಿ ಸೋಂಕು ಇರುವುದು ದೃಢಪಟ್ಟಿದೆ.