ಬೆಂಗಳೂರು, ಮೇ. 09 (DaijiworldNews/HR): ಕರ್ನಾಟಕದಲ್ಲಿ ನಾಳೆಯಿಂದ ಲಾಕ್ಡೌನ್ ಜಾರಿಯಲ್ಲಿದ್ದು, ಜನತೆ ಸ್ವಯಂ ಪ್ರೇರಿತರಾಗಿ ಸಹಕರಿಸಬೇಕು" ಎಂದು ಸಚಿವ.ಎಸ್.ಸುರೇಶ್ ಕುಮಾರ್ ಮನವಿ ಮಾಡಿಕೊಂಡಿದ್ದಾರೆ.
ಈ ಕುರಿತು ಸುದ್ದಿಗಾರರೊಂದೊಗೆ ಮಾತನಾಡಿದ ಅವರು, "ಕೊರೊನಾ ಸರಪಳಿಯನ್ನು ತುಂಡರಿಸದಿದ್ದಲ್ಲಿ ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಅತ್ಯಂತ ತೀವ್ರಗತಿಯಲ್ಲಿ ಹದಗೆಡಲಿದ್ದು, ಜನತೆ ತಮ್ಮ ಹಾಗೂ ಸಮಾಜದ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ಮನೆಯಲ್ಲಿಯೇ ಉಳಿದು ಸಹಕಾರ ನೀಡಬೇಕು" ಎಂದರು.
ಇನ್ನು ಗ್ರಾಮಾಂತರ ಪ್ರದೇಶಗಳ ನಾಗರಿಕರೂ ಲಾಕ್ಡೌನ್ ಕುರಿತಂತೆ ವಿಶೇಷ ಗಮನ ಹರಿಸಬೇಕು ಎಂದು ಮನವಿ ಮಾಡಿದ್ದಾರೆ.
"ಜಿಲ್ಲೆಗಳಿಗೆ ಆಕ್ಸಿಜನ್ ಪೂರೈಕೆ ಕುರಿತಂತೆ ರಾಜ್ಯ ಸರ್ಕಾರವು ಜಿಲ್ಲಾವಾರು ಕೋಟಾ ನಿಗದಿಪಡಿಸಿದ್ದು, ಇದರಿಂದ ಆಮ್ಲಜನಕ ಹಂಚಿಕೆಯಲ್ಲಿ ಉದ್ಭವಿಸುತ್ತಿದ್ದ ಅನವಶ್ಯಕವಾದ ಗೊಂದಲ, ಸಂಘರ್ಷಗಳು ನಿವಾರಣೆಯಾಗಲಿದ್ದು, ಹಂಚಿಕೆ ಹೆಚ್ಚು ವೈಜ್ಞಾನಿಕವಾಗಿರಲಿದೆ" ಎಂದು ಹೇಳಿದ್ದಾರೆ.