ಬೆಂಗಳೂರು, ಮೇ. 09 (DaijiworldNews/HR): ಈಗೀನ ಯುವಜನತೆ ಒಂದಿಲ್ಲ ಒಂದು ರೀತಿಯಲ್ಲಿ ಆನ್ಲೈನ್ ವ್ಯವಹಾರಕ್ಕೆ ಮೊರೆ ಹೋಗುತ್ತಿದ್ದು, ಇದನ್ನೇ ದುರುಪಯೋಗ ಪಡಿಸಿಕೊಳ್ಳುತ್ತಿರುವ ಸೈಬರ್ ಖದೀಮರು ಅಮಾಯಕರಿಗೆ ಬಲೆ ಬೀಸಿ ಸಂಕಷ್ಟದಲ್ಲಿಯೂ ಲಕ್ಷಾಂತರ ರೂಪಾಯಿ ವಂಚನೆ ಮಾಡುತ್ತಿರುವುದು ಬೆಳಕಿಗೆ ಬಂದಿದೆ.
ಸಾಂಧರ್ಭಿಕ ಚಿತ್ರ
ನಿವಾಸಿ ಆನ್ಲೈನ್ನಲ್ಲಿ ವ್ಯಕ್ತಿಯೊಬ್ಬರು ಔಷಧ ಆರ್ಡರ್ ಮಾಡಿದ್ದು, ಔಷಧ ಬರುವುದು ತಡವಾದ ಕಾರಣಕ್ಕೆ ಕಂಪನಿಯ ವಾಟ್ಸ್ಆಯಪ್ ನಂಬರ್ಗೆ ಕರೆ ಮಾಡಿದ್ದಾರೆ. ಕರೆ ಸ್ವೀಕರಿಸಿದ ವ್ಯಕ್ತಿ, ಮೆಡಿಸಿನ್ ಆಸ್ಪತ್ರೆಗೆ ಪಾರ್ಸೆಲ್ ಕಳುಹಿಸುತ್ತೇವೆ. ಮುಂಗಡವಾಗಿ ಹಣ ಪಾವತಿ ಮಾಡಬೇಕೆಂದು ಹಂತ ಹಂತವಾಗಿ 85 ಸಾವಿರ ರೂ.ಗಳನ್ನು ತನ್ನ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಿಸಿಕೊಂಡು ಮೋಸ ಮಾಡಿದ್ದಾನೆ.
ಕೊನೆಗೆ ವಂಚನೆಗೆ ಒಳಗಾಗಿರುವ ವಿಚಾರ ಗೊತ್ತಾಗಿ ಕೇಂದ್ರ ವಿಭಾಗ ಸಿಇಎನ್ ಠಾಣೆಗೆ ದೂರು ನೀಡಿದ್ದಾರೆ.
ಇನ್ನು ಮತ್ತೊಂದು ಪ್ರಕರಣದಲ್ಲಿ ವಾಟ್ಸ್ಆಯಪ್ನಲ್ಲಿ ಬಂದ ಸಂದೇಶದಲ್ಲಿ ಆಕ್ಸಿಜನ್ ಸಿಲಿಂಡರ್ಗೆ ಸಂಪರ್ಕಿಸಿ ಎಂದು ಉಲ್ಲೇಖಿಸಿದ್ದ ಮೊಬೈಲ್ ನಂಬರ್ಗೆ ಕರೆ ಮಾಡಿದ ಮಹಿಳೆಯಿಂದ 47 ಸಾವಿರ ರೂ. ಅನ್ನು ಗೂಗಲ್ ಪೇಯಿಂದ ವರ್ಗಾವಣೆ ಮಾಡಿಸಿಕೊಂಡು ಖದೀಮರು ನಾಪತ್ತೆಯಾಗಿದ್ದಾರೆ ಎನ್ನಲಾಗಿದೆ.
ಹಣ ಕೊಟ್ಟು ಎಷ್ಟು ಹೊತ್ತಾದರೂ ಸಿಲಿಂಡರ್ ಬಾರದೆ ಇದ್ದಾಗ ಅನುಮಾನ ಬಂದು ಮಹಿಳೆ ಮತ್ತೆ ಕರೆ ಮಾಡಿದಾಗ ಮೊಬೈಲ್ ಸ್ವಿಚ್ ಆಫ್ ಆಗಿದ್ದು, ನೊಂದ ಮಹಿಳೆ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿರುವ ವೈಟ್ಫೀಲ್ಡ್ ವಿಭಾಗ ಸಿಇಎನ್ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.