ಮೈಸೂರು, ಮೇ. 09 (DaijiworldNews/HR): ಕರ್ನಾಟಕದಲ್ಲಿ ಕೊರೊನಾ ಪ್ರಕರಣ ಹೆಚ್ಚಾಗಿ ಜನರು ಸಂಕಷ್ಟದಲ್ಲಿರುವಾಗ, ಮೈಸೂರಿನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ತಮ್ಮ ಅಧಿಕೃತ ನಿವಾಸದಲ್ಲಿ ಈಜುಕೊಳ ಮತ್ತು ವೈಯಕ್ತಿಕ ಜಿಮ್ ನಿರ್ಮಿಸಿಕೊಂಡಿದ್ದಾರೆ ಎಂದು ಜೆಡಿಎಸ್ ಮುಖಂಡ ಆರೋಪ ಮಾಡಿದ್ದಾರೆ.
ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರ ನಿವಾಸದಲ್ಲಿ ಈಜುಕೊಳ, ಜಿಮ್ ನಿರ್ಮಾಣ ಮಾಡಿಕೊಂಡಿರುವ ವಿಚಾರವನ್ನು ಬಹಿರಂಗಪಡಿಸಿದ ಜೆಡಿಎಸ್ ಮುಖಂಡ ಮತ್ತು ಮಾಜಿ ಸಲಹೆಗಾರ ಕೆ ವಿ ಮಲ್ಲೇಶ್, ಡಿಸಿಯವರು ಈಜುಕೊಳ ಮತ್ತು ವೈಯಕ್ತಿಕ ಜಿಮ್ ನಿರ್ಮಾಣಕ್ಕಾಗಿ ಕನಿಷ್ಠ 50 ಲಕ್ಷ ರೂ. ವೆಚ್ಚ ಮಾಡುತ್ತಿದು, ಅದಕ್ಕಾಗಿ ಎಲ್ಲಿಯ ಹಣ ಬಳಸಿಕೊಂಡಿದ್ದಾರೆ ಎಂದು ಸ್ಪಷ್ಟಪಡಿಸುವಂತೆ ಕೇಳಿಕೊಂಡಿದ್ದಾರೆ.
"ಜಿಲ್ಲಾಧಿಕಾರಿಯವರ ಅಧಿಕೃತ ನಿವಾಸವು ಪಾರಂಪರಿಕ ಕಟ್ಟಡವಾಗಿದ್ದು, ಯಾವುದೇ ಮಾರ್ಪಾಡು ಮತ್ತು ಹೊಸ ನಿರ್ಮಾಣ ಮಾಡುವ ಮುನ್ನವಿಶೇಷ ಅನುಮತಿ ಮತ್ತು ಸಮಾಲೋಚನೆಯ ಅಗತ್ಯವಿರುತ್ತದೆ" ಎಂದರು.
ಇನ್ನು "ಈಜುಕೊಳದ ನಿರ್ಮಾಣಕ್ಕೆ ಸಾರ್ವಜನಿಕ ಹಣವನ್ನು ಬಳಸಿಲ್ಲವಾದಲ್ಲಿ, ಇದಕ್ಕಾಗಿ ಯಾರು ಹಣ ನೀಡಿದ್ದಾರೆ ಎಂದು ಸ್ಪಷ್ಟಪಡಿಸಬೇಕು. ಡಿಸಿ ಇದರ ಬಗ್ಗೆ ಸ್ಪಷ್ಟತೆ ನೀಡದೆ ಹೋದಲ್ಲಿ ನ್ಯಾಯಾಲಯದಲ್ಲಿ ಪ್ರಶ್ನಿತ್ತೇನೆ" ಎಂದು ಹೇಳಿದ್ದಾರೆ.