ನವದೆಹಲಿ, ಮೇ 09 (DaijiworldNews/MB) : ದೇಶದಾದ್ಯಂತ ಕೊರೊನಾ ಸೋಂಕು ಪ್ರಕರಣಗಳು ತೀವ್ರ ಪ್ರಮಾಣದಲ್ಲಿ ಏರಿಕೆ ಕಾಣುತ್ತಿದೆ. ಏತನ್ಮಧ್ಯೆ ಕೇಂದ್ರ ಸರ್ಕಾರವು ಗ್ರಾಮೀಣ ಸ್ಥಳೀಯ ಸಂಸ್ಥೆಗಳಿಗೆ 8,923 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದೆ.
ಈ ಬಗ್ಗೆ ಹೇಳಿಕೆ ನೀಡಿರುವ ಹಣಕಾಸು ಸಚಿವಾಲಯ, ಈ 8,923 ಕೋಟಿ ರೂ. ಅನುದಾನವು 25 ರಾಜ್ಯಗಳ ಗ್ರಾಮ, ಬ್ಲಾಕ್ ಮತ್ತು ಜಿಲ್ಲಾ ಪಂಚಾಯತ್ ರಾಜ್ ಸಂಸ್ಥೆಗಳಿಗೆ ದೊರೆಯಲಿದೆ. ಕೊರೊನಾ ವಿರುದ್ದ ಹೋರಾಟಕ್ಕೆ ಇದು ಮೂರು ಹಂತದ ಪಂಚಾಯತ್ಗಳಿಗೆ ಸಂಪನ್ಮೂಲಗಳನ್ನು ಅಧಿಕಗೊಳಿಸುತ್ತದೆ ಎಂದು ಹೇಳಿದೆ.
15 ನೇ ಹಣಕಾಸು ಆಯೋಗದ ಶಿಫಾರಸ್ಸಿನಂತೆ ಅನುದಾನದ ಮೊದಲ ಭಾಗವನ್ನು ಜೂನ್ ತಿಂಗಳಲ್ಲಿ ಬಿಡುಗಡೆ ಮಾಡಬೇಕಿತ್ತು. ಆದರೆ ಕೊರೊನಾ ಸೋಂಕಿನ ಹಿನ್ನೆಲೆ ಒಂದು ತಿಂಗಳು ಮುಂಚಿತವಾಗಿ ಈ ಅನುದಾನ ಬಿಡುಗಡೆ ಮಾಡಲಾಗಿದೆ.
ಇನ್ನು ಹಣವನ್ನು ಬಿಡುಗಡೆ ಮಾಡಲು ಇರುವ ಕೆಲವು ಷರತ್ತುಗಳನ್ನೂ ತೆಗೆದುಹಾಕಲಾಗಿದೆ ಎಂದು ಹೇಳಲಾಗಿದೆ.