ನವದೆಹಲಿ, ಮೇ. 09 (DaijiworldNews/HR): ದೆಹಲಿಯಲ್ಲಿ ಮತ್ತೆ ಒಂದು ವಾರಗಳ ಕಾಲ ಲಾಕ್ಡೌನ್ ವಿಸ್ತರಿಸಲಾಗಿದ್ದು, ಮೇ.17ರ ವರೆಗೆ ಜಾರಿಯಲ್ಲಿರಲಿದೆ ಎಂದು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ತಿಳಿಸಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಅವರು, "ಕಳೆದ ಎರಡು ಮೂರು ದಿನಗಳಿಂದ ರಾಜ್ಯದಲ್ಲಿಕೊರೊನಾ ಪಾಸಿಟಿವಿ ಶೇ. 35% ನಿಂದ 23% ಇಳಿಕೆಯಾಗಿದ್ದು, ಮತ್ತೆ ಒಂದು ವಾರಗಳ ವರೆಗೆ ಲಾಕ್ಡೌನ್ ವಿಸ್ತರಣೆ ಮಾಡಲಾಗಿದ್ದು, ಈ ಅವಧಿಯಲ್ಲಿ ಮೆಟ್ರೋ ರೈಲಿನ ಸೇವೆಯೂ ಬಂದ್ ಇರಲಿದೆ" ಎಂದರು.
ಕಳೆದ ಕೆಲ ದಿನಗಳಿಂದ ದೆಹಲಿಯಲ್ಲಿ ಲಾಕ್ಡೌನ್ ವಿಧಿಸಲಾಗಿದ್ದು, ಲಾಕ್ಡೌನ್ ಜಾರಿಯಿಂದ ಕೊರೊನಾ ಹರಡುವಿಕೆಯನ್ನು ತಡೆಗಟ್ಟ ಬಹುದಾಗಿದ್ದು,ಮತ್ತೊಮ್ಮೆ ಲಾಕ್ ಡೌನ್ ಮೊರೆ ಹೋಗಲಾಗಿದೆ.
ಇನ್ನು ಮೇ.3 ರಿಂದ 8 ವರೆಗೆ ದೆಹಲಿಯಲ್ಲಿ 1,15,285 ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು, ಇದೆ ಅವಧಿಯಲ್ಲಿ 2105 ಸೋಂಕಿನಿಂದ ಮೃತಪಟ್ಟಿರುವ ಹಿನ್ನೆಲೆಯಲ್ಲಿ ಮತ್ತೆ ಲಾಕ್ಡೌನ್ ಮುಂದುವರೆಸಲು ಸರ್ಕಾರ ನಿರ್ಧರಿಸಿದೆ.