ಬಾಗಲಕೋಟೆ, ಮೇ. 09 (DaijiworldNews/HR): ದೇಶದಾದ್ಯಂತ ಕೊರೊನಾದ ಎರಡನೇ ಅಲೆ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದ್ದು, ಸಾವನ್ನಪ್ಪಿದವರ ಸಂಖ್ಯೆಯು ಏರಿಕೆಯಾಗುತ್ತಿದೆ. ಇನ್ನು ಮೂರನೇ ಅಲೆ ಬರುತ್ತೆ ಅದರಿಂದ ನಾವು, ನೀವು ಉಳಿಯಬೇಕು. ನೀವು ಉಳಿಯುತ್ತೀರೋ ಇಲ್ಲವೋ ಗೊತ್ತಿಲ್ಲ, ನಾನಂತೂ ಉಳಿಯಬೇಕು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಉಮೇಶ ಕತ್ತಿ ಮತ್ತೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಅವರು, "ಮೂರನೇ ಅಲೆ ಬರುತ್ತೆ ಅದರಿಂದ ನಾವು-ನೀವು ಉಳಿಯಬೇಕು, ನೀವು ಉಳಿಯುತ್ತೀರೋ ಇಲ್ಲವೋ ಗೊತ್ತಿಲ್ಲ" ಎಂದು ನಗುತ್ತಲೇ ಮಾತನಾಡಿದ್ದಾರೆ.
ಇನ್ನು ವಿರೋಧ ಪಕ್ಷದವರು ಸಾವಿರ ಸುಳ್ಳುಗಳನ್ನು ಹೇಳುತ್ತಾರೆ ಅವರೆಲ್ಲರ ಟೀಕೆಗಳಿಗೆ ಯಾರು ತಲೆ ಕೆಡೆಸಿಕೊಳ್ಳುವ ಅಗತ್ಯವಿಲ್ಲ" ಎಂದ ಹೇಳಿದ್ದಾರೆ.