ಬೆಂಗಳೂರು, ಮೇ. 09 (DaijiworldNews/HR): ಭಾರತೀಯ ಸೇನೆಯು 83 ಮಹಿಳಾ ಸೈನಿಕರ ಮೊದಲ ಬ್ಯಾಚ್ ಅನ್ನು ಮಿಲಿಟರಿ ಪೊಲೀಸರಿಗೆ ಸೇರಿಸಿಕೊಂಡಿದೆ ಎಂದು ತಿಳಿದು ಬಂದಿದೆ.
ಬೆಂಗಳೂರಿನಲ್ಲಿರುವ ಕಾರ್ಪ್ಸ್ ಆಫ್ ಮಿಲಿಟರಿ ಪೋಲಿಸ್ ಸೆಂಟರ್ ಮತ್ತು ಸ್ಕೂಲ್ (ಸಿಎಂಪಿ ಸಿ & ಎಸ್) ಮೇ 8 ರಂದು ಕೊರೊನಾ ಪ್ರಟೊಕಾಲ್ ಅನುಸರಿಸಿ ದ್ರೋಣಾಚಾರ್ಯ ಪೆರೇಡ್ ಮೈದಾನದಲ್ಲಿ 83 ಮಹಿಳಾ ಸೈನಿಕರ ಮೊದಲ ಬ್ಯಾಚ್ನ ಪೆರೇಡ್ ನಡೆಸಿತು ಎಂದು ಸೇನೆಯು ಹೇಳಿಕೆಯಲ್ಲಿ ತಿಳಿಸಿದೆ.
ಭಾರತೀಯ ಸೇನೆಯು 100 ಯುವತಿಯರನ್ನು ಸೈನಿಕರನ್ನಾಗಿಸಲು ತಯಾರಿ ನಡೆಸಿತು. ಆದರೆ 17 ಮಂದಿಯನ್ನು ವೈದ್ಯಕೀಯ ಆಧಾರದ ಮೇಲೆ, ಮತ್ತೆ ಕೆಲವರು ಪರೀಕ್ಷೆಗಳಲ್ಲಿ ವಿಫಲರಾಗಿದ್ದ ಕಾರಣ ಹಿಂದಕ್ಕೆ ಕಳುಹಿಸಯಿತು ಎಂದು ಸೇನೆ ತಿಳಿಸಿದೆ.
ಸಿಎಂಪಿ ಕೇಂದ್ರ ಮತ್ತು ಶಾಲೆಯ ಕಮಾಂಡೆಂಟ್, ಬ್ರಿಗೇಡಿಯರ್ ಸಿ. ದಯಾಲನ್, ಈ ಮಹಿಳೆಯರು 61 ವಾರಗಳ ತರಬೇತಿ ಅವಧಿಯ ನಂತರ ಸೈನ್ಯಕ್ಕೆ ಸೇರಿದ್ದಾರೆ. ತರಬೇತಿಯು ಮೂಲಭೂತ ಮಿಲಿಟರಿ ತರಬೇತಿ, ಎಲ್ಲಾ ರೀತಿಯ ಪೊಲೀಸ್ ಕರ್ತವ್ಯಗಳು ಮತ್ತು ಯುದ್ಧ ಕೈದಿಗಳ ನಿರ್ವಹಣೆ, ವಿಧ್ಯುಕ್ತ ಕರ್ತವ್ಯಗಳು ಮತ್ತು ಕೌಶಲ್ಯ ಅಭಿವೃದ್ಧಿಗೆ ಸಂಬಂಧಿಸಿದ ಎಲ್ಲಾ ವಾಹನಗಳನ್ನು ಚಾಲನೆ ಮಾಡುವುದು ಮತ್ತು ನಿರ್ವಹಿಸುವುದು ಮತ್ತು ಸಂವಹನವನ್ನು ಒಳಗೊಂಡಿದೆ ಎಂದು ತಿಳಿಸಿದ್ದಾರೆ.
ಇನ್ನು ಅವರಿಗೆ ನೀಡಲಾಗುವ ತರಬೇತಿಗಳು ಪುರುಷ ಸಹವರ್ತಿಗಳಿಗೆ ನೀಡುವಂತೆ ಸಮನಾಗಿರುತ್ತವೆ ಎಂದು ಹೇಳಿದ್ಡಾರೆ.