ನವದೆಹಲಿ, ಮೇ.09 (DaijiworldNews/PY): ಆಕ್ಸಿಜನ್ ಹೊತ್ತ ಟ್ಯಾಂಕರ್ಗಳಿಗೆ ರಾಷ್ಟ್ರೀಯ ಹೆದ್ದಾರಿಗಳಲ್ಲಿನ ಟೋಲ್, ಪ್ಲಾಜಾಗಳಲ್ಲಿ ಯಾವುದೇ ಶುಲ್ಕ ವಿಧಿಸದೇ ಸಾಗಲು ಅನುವು ಮಾಡಿಕೊಡಲಾಗಿದೆ.
"ಮುಂದಿನ ಆದೇಶ ಬರುವವರೆಗೆ ವೈದ್ಯಕೀಯ ಆಕ್ಸಿಜನ್ ಹೊತ್ತ ಕಂಟೈನರ್ಗಳನ್ನು ಆಂಬ್ಯುಲೆನ್ಸ್ಗಳಂತ ತುರ್ತು ಸೇವೆಗಳ ವಾಹನಗಳಾಗಿ ಪರಿಗಣಿಸಲಾಗುತ್ತದೆ" ಎಂದು ಭೂಸಾರಿಗೆ ಹಾಗೂ ಹೆದ್ದಾರಿ ಸಚಿವಾಲಯ ಹೇಳಿದೆ.
"ಫಾಸ್ಟ್ ಟ್ಯಾಗ್ ಅನುಷ್ಠಾನದ ಬಳಿಕ ಟೋಲ್ ಪ್ಲಾಜಾಗಳಲ್ಲಿ ಹೆಚ್ಚು ಕಾಲ ಕಾಯಲು ಇಲ್ಲವಾದರೂ, ಆಕ್ಸಿಜನ್ ಹೊತ್ತ ವಾಹನಗಳಿಗೆ ತ್ವರಿತ ಹಾಗೂ ತಡೆರಹಿತ ಸಂಚಾರಕ್ಕೆ ಎನ್ಹೆಚ್ಐ ಅನುವು ಮಾಡಿ ಕೊಟ್ಟಿದೆ" ಎಂದು ಪ್ರಕಟಣೆ ತಿಳಿಸಿದೆ.
ಕೊರೊನಾ ವಿರುದ್ದ ಹೋರಾಡಲು ಹಾಗೂ ರೋಗಿಗಳ ಜೀವ ಕಾಪಾಡಲು, ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಿಗೆ ನೆರವಾಗುವಂತೆ ತನ್ನ ಅಧಿಕಾರಿಗಳು ಹಾಗೂ ಇತರ ಭಾಗೀದಾರರಿಗೆ ಪ್ರಾಧಿಕಾರಿ ಸೂಚನೆ ನೀಡಿದೆ.
"ಕೊರೊನಾ ಸೋಂಕಿತರ ಜೀವ ಉಳಿಸಲು ಆಸ್ಪತ್ರೆಗಳಿಗೆ ಹಾಗೂ ವೈದ್ಯಕೀಯ ಕೇಂದ್ರಗಳಿಗೆ ವೈದ್ಯಕೀಯ ಆಕ್ಸಿಜನ್ ಸಕಾಲದಲ್ಲಿ ಪೂರೈಕೆ ಮಾಡುವುದು ಸರ್ಕಾರದ ಪ್ರಮುಖ ಆದ್ಯತೆಯಾಗಿದೆ. ಈ ನಿಟ್ಟಿನಲ್ಲಿ ಆಕ್ಸಿಜನ್ ಹೊತ್ತ ಟ್ಯಾಂಕರ್ಗಳಿಗೆ ರಾಷ್ಟ್ರೀಯ ಹೆದ್ದಾರಿಗಳಲ್ಲಿನ ಟೋಲ್, ಪ್ಲಾಜಾಗಳಲ್ಲಿ ಯಾವುದೇ ಶುಲ್ಕ ವಿಧಿಸದಿರಲು ನಿರ್ಧರಿಸಲಾಗಿದೆ" ಎಂದು ಸರ್ಕಾರ ವಿವರಿಸಿದೆ.