ಬೆಂಗಳೂರು, ಮೇ. 08 (DaijiworldNews/HR): ಕರ್ನಾಟಕದಲ್ಲಿ ಒರೊನಾ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿರುವುದರಿಂದ ವೈದ್ಯರು ಪ್ರತಿಯೊಬ್ಬರಿಗೂ ತಮ್ಮ ಜೀವನಕ್ರಮದಲ್ಲಿ ಆರೋಗ್ಯದ ಹಿತದೃಷ್ಟಿಯಿಂದ ವ್ಯಾಯಾಮವನ್ನು ಮಾಡುವಂತೆ ಮತ್ತು ಆಹಾರದಲ್ಲೂ ಜಾಗೃತಿ ವಹಿಸುವಂತೆ ಸೂಚಿಸಿದ್ದಾರೆ. ಆದರೆ ಬೆಂಗಳೂರಿನ ಸರ್ಜಾಪುರ ಪೊಲೀಸರು ಒಂದು ಹೆಜ್ಜೆ ಮುಂದೆ ಹೋಗಿ ವಿಭಿನ್ನ ಆಲೋಚನೆ ಮಾಡಿದ್ದು, ಈ ಠಾಣೆಯ ಪೊಲೀಸರು ಪ್ರೆಶರ್ ಕುಕ್ಕರ್ ಸುತ್ತಲೂ ನಿಂತು ಹಬೆಯನ್ನು ತೆಗೆದುಕೊಳ್ಳುವ ಮೂಲಕ ಪ್ರೆಶರ್ ಕುಕ್ಕರ್ ಉಸಿರಾಟದ ಸಾಧನವಾಗಿ ಮಾಡಿಕೊಂಡಿದ್ದಾರೆ.
ಬಿಸಿ ನೀರನ್ನು ಪ್ರೆಶರ್ ಕುಕ್ಕರ್ನಲ್ಲಿ ತುಂಬಿಸಿ ಬಳಿಕ ಆ ಬಿಸಿ ನೀರಿಗೆ ಔಷಧದ ಗಿಡಮೂಲಿಕೆಗಳು, ಬೇವಿನ ಎಲೆಗಳು, ತುಳಸಿ, ನೀಲಗಿರಿ ಎಲೆಗಳನ್ನು ಸೇರಿಸಿ ಅವೆಲ್ಲವೂ ಕುದಿದು ಹೊರ ಬರುವ ಹಬೆಯನ್ನು ಪೊಲೀಸರು ಟ್ಯೂಬ್ ಮೂಲಕ ತೆಗೆದುಕೊಳ್ಳುತ್ತಾರೆ.
ಇನ್ಹೇಲಿಂಗ್ ಪ್ರೆಶರ್ ಕುಕ್ಕರ್ ಸ್ಟೀಲ್ ಪೈಪ್ ಮತ್ತು ಒಂದು ಜೋಡಿ ದ್ವಾರಗಳನ್ನು ಹೊಂದಿದ್ದು, ಒಂದು ಸಮಯದಲ್ಲಿ ಇಬ್ಬರು ಪೊಲೀಸ್ ಅಧಿಕಾರಿಗಳಿಗೆ ಉಸಿರಾಡಲು ಸಹಾಯ ಮಾಡುತ್ತದೆ ಎಂದು ಠಾಣೆಯ ಉಸ್ತುವಾರಿ ಪೊಲೀಸ್ ಹರೀಶ್ ಮಾಹಿತಿ ನೀಡಿದ್ದಾರೆ.
ಇನ್ನು ಪೊಲೀಸರು ತಮ್ಮ ಪಾಳಿ ಮುಗಿಸಿಕೊಂಡು ಹೋಗುವ ಮೊದಲು ಪ್ರೆಶರ್ ಕುಕ್ಕರ್ ಹಬೆಯನ್ನು ತೆಗೆದುಕೊಂಡು ಹೋಗಬೇಕು. ಪೊಲೀಸರಿಗೆ ಕೆಲವೊಮ್ಮೆ ಅವರ ಕುಟುಂಬಗಳಿಗೆ ಜಿಂಕ್ ಮಾತ್ರೆಗಳನ್ನು ಸಹ ನೀಡಲಾಗುತ್ತದೆ.
ಮಂಗಳೂರಿನ ಬಾರ್ಕೆ ಪೊಲೀಸ್ ಠಾಣೆಯಲ್ಲೂ ಕೂಡ ಈ ರೀತಿಯಾಗಿ ಹಬೆಯನ್ನು ತೆಗೆದುಕೊಳ್ಳುತ್ತಿದ್ದು, ಇಲ್ಲಿ ಸಿಬ್ಬಂದಿ ನಾಲ್ಕು ದ್ವಾರಗಳನ್ನು ಹೊಂದಿರುವ ಉಕ್ಕಿನ ಪೈಪ್ ಅನ್ನು ಜೋಡಿಸಿ ಮರದ ಚೌಕಟ್ಟಿನಲ್ಲಿ ಕಟ್ಟಿದ್ದು, ಮೂರು ದ್ವಾರಗಳ ಉಗಿಯನ್ನು ಉಸಿರಾಡಲು ಬಳಸಬಹುದು ಮತ್ತು ನಾಲ್ಕನೆಯದನ್ನು ಪ್ರೆಶರ್ ಕುಕ್ಕರ್ಗೆ ಸಂಪರ್ಕಿಸಲಾಗಿದೆ.
ಇನ್ನು ಈ ಸಾಧನವು ಇನ್ಸ್ಪೆಕ್ಟರ್ ಜ್ಯೋರ್ತಿಲಿಂಗಹೊನಕಟ್ಟಿಯವರ ಮೆದುಳಿನ ಕೂಸು ಎಂದು ಕರೆದಿದ್ದಾರೆ. ಕಳೆದ ವರ್ಷ ಅವರು ಬೆಳಗಾವಿಯಲ್ಲಿ ಇದನ್ನು ತಯಾರಿಸಿದ್ದಾರೆ. ಚಿತ್ರದುರ್ಗ, ಶಿವಮೊಗ್ಗ ಮತ್ತು ಹಾವೇರಿ ಜಿಲ್ಲೆಗಳಲ್ಲಿನ ಅನೇಕ ಇತರ ಪೊಲೀಸ್ ಠಾಣೆಗಳು ಸಹ ತಮ್ಮ ಕಚೇರಿಗಳಲ್ಲಿ ಇದೇ ರೀತಿಯ ಉಸಿರಾಡುವ ವ್ಯಾಯಾಮವನ್ನು ಪ್ರಾರಂಭಿಸಲು ಪ್ರೇರಣೆ ನೀಡಿವೆ.