ನವದೆಹಲಿ, ಮೇ. 08 (DaijiworldNews/HR): ಭಾರತದಾದ್ಯಂತ 9,02,291 ಲಕ್ಷ ಮಂದಿ ಕೊರೊನಾ ಸೋಂಕಿತರು ಆಕ್ಸಿಜನ್ನ ಬೆಂಬಲದಲ್ಲಿದ್ದು, 1,70,841 ಲಕ್ಷ ರೋಗಿಗಳು ವೆಂಟಿಲೇಟರ್ನಲ್ಲಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಮಾಹಿತಿ ನೀಡಿದ್ದಾರೆ.
ಕೊರೊನಾ ಪರಿಸ್ಥಿತಿ ಕುರಿತು ಚರ್ಚಿಸಲು ಸಚಿವರ ತಂಡದ 25ನೇ ವರ್ಚುವಲ್ ಸಭೆ ಉದ್ದೇಶಿಸಿ ಮಾತನಾಡಿದ ಹರ್ಷವರ್ಧನ್ ಅವರು, "ದೇಶಾದ್ಯಂತ ಶೇ. 1.34 ರಷ್ಟು ಕೊರೊನಾ ಸೋಂಕಿತರು ಐಸಿಯುನಲ್ಲಿದ್ದಾರೆ, ಶೇ.0.39 ರಷ್ಟು ಪ್ರಕರಣಗಳು ವೆಂಟಿಲೇಟರ್ ಮತ್ತು ಶೇ. 3.70 ಕೋವಿಡ್ ರೋಗಿಗಳು ಆಮ್ಲಜನಕದ ಬೆಂಬಲದಲ್ಲಿದ್ದಾರೆ "ಎಂದರು.
ಸಭೆಯಲ್ಲಿ ನಾಗರಿಕ ವಿಮಾನಯಾನ ಸಚಿವ ಹರ್ದೀಪ್ ಪುರಿ, ವಿದೇಶಾಂಗ ಸಚಿವ ಎಸ್.ಜೈಶಂಕರ್, ಬಂದರು, ಹಡಗು ಮತ್ತು ಜಲಮಾರ್ಗ ಮತ್ತು ರಾಸಾಯನಿಕ ಮತ್ತು ರಸಗೊಬ್ಬರಗಳ ಸಚಿವ ಮನ್ಸುಖ್ ಮಾಂಡವಿಯಾ ಮತ್ತು ರಾಜ್ಯ ಸಚಿವರು, ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ್ ರೈ. ಆರೋಗ್ಯ, ಕುಟುಂಬ ಕಲ್ಯಾಣ ಇಲಾಖೆ ರಾಜ್ಯ ಸಚಿವ ಅಶ್ವಿನಿ ಕುಮಾರ್ ಚೌಬೆ ಮತ್ತು ನೀತಿ ಆಯೋಗದ ಸದಸ್ಯ (ಆರೋಗ್ಯ) ಸದಸ್ಯ ವಿನೋದ್ ಕೆ ಪೌಲ್ ಭಾಗವಹಿಸಿದ್ದರು.