ಉತ್ತರ ಪ್ರದೇಶ, ಮೇ. 08 (DaijiworldNews/HR): ಉತ್ತರ ಪ್ರದೇಶದ ಚಾಂದಿನಗರ ಪ್ರದೇಶದ ಸಿಂಗೌಲಿ ಟಾಗಾ ಗ್ರಾಮದಲ್ಲಿ ಆಟವಾಡುತ್ತಿದ್ದ ವೇಳೆ ಕಾರಿನಲ್ಲಿ ಸಿಕ್ಕಿಬಿದ್ದ ನಾಲ್ವರು ಮಕ್ಕಳು ಉಸಿರುಗಟ್ಟಿ ಮೃತಪಟ್ಟು, ಓರ್ವ ಬಾಲಕನನ್ನು ರಕ್ಷಿಸಿದ ಘಟನೆ ವರದಿಯಾಗಿದೆ.
ಸಾಂಧರ್ಭಿಕ ಚಿತ್ರ
ಮೃತಪಟ್ಟ ಮಕ್ಕಳನ್ನು ನಿಯತಿ (8), ವಂದನಾ (8), ಅಕ್ಷಯ್ (4), ಕೃಷ್ಣ (7) ಮತ್ತು ಶಿವಾಂಶ್ (8) ಎಂದು ಗುರುತಿಸಲಾಗಿದೆ.
ಅನಿಲ್ ತ್ಯಾಗಿ ಎಂಬವರ ಮನೆಯ ಹೊರಗಡೆ ಪಾರ್ಕ್ ಮಾಡಲಾಗಿದ್ದ ಕಾರಿನೊಳಗೆ ಐವರು ಮಕ್ಕಳು ಆಟವಾಡುತ್ತಿದ್ದು, ಆಕಸ್ಮಾತ್ ಕಾರ್ ಲಾಕ್ ಆದ ಕಾರಣ ಮಕ್ಕಳು ಕಾರಿನೊಳಗೆ ಸಿಕ್ಕಿಬಿದ್ದಿದ್ದು, ಬಳಿಕ ಉಸಿರಾಡಲು ಸಾಧ್ಯವಾಗದೆ ಮೃತಪಟ್ಟಿರುವ ಘಟನೆ ನಡೆದಿದೆ.
ಇನ್ನು ಶಿವಾಂಶ್ ಎಂಬ ಒಬ್ಬ ಬಾಲಕನ್ನು ಹೊರತುಪಡಿಸಿ ಇತರೆಲ್ಲರು ಸ್ಥಳದಲ್ಲೇ ಮೃತಪಟ್ಟಿದ್ದರು.
ಕಾರು ಮಾಲೀಕನ ಕ್ರೂರ ನಡೆಯಿಂದಾಗಿ ಈ ಅವಘಡ ಸಂಭವಿಸಿದೆ ಎಂದು ನೆರೆಹೊರೆಯವರು ಆರೋಪಿಸಿದ್ದು, ಘಟನೆ ಬಗ್ಗೆ ಪೂಲೀಸರು ತನಿಖೆ ನಡೆಸುತ್ತಿದ್ದಾರೆ.