ನವದೆಹಲಿ, ಮೇ.08 (DaijiworldNews/PY): ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (ಡಿಸಿಜಿಐ), ಆ್ಯಂಟಿ-ಕೋವಿಡ್ ಔಷಧಿಯ ತುರ್ತು ಬಳಕೆಗೆ ಅನುಮೋದನೆ ನೀಡಿದೆ.
ಸಾಂದರ್ಭಿಕ ಚಿತ್ರ
"ಡಿಆರ್ಡಿಒದ ಪ್ರಯೋಗಾಲಯದಲ್ಲಿ ಇನ್ಸ್ಟಿಟ್ಯೂಟ್ ಆಫ್ ನ್ಯೂಕ್ಲಿಯರ್ ಮೆಡಿಸಿನ್ ಮತ್ತು ಅಲೈಡ್ ಸೈನ್ಸಸ್ (ಐಎನ್ಎಂಎಎಸ್) ಹೈದರಾಬಾದ್ನ ಡಾ.ರೆಡ್ಡಿ ಪ್ರಯೋಗಾಲಯಗಳ ಸಹಯೋಗದೊಂದಿಗೆ ಅಭಿವೃದ್ದಿಪಡಿಸಿದೆ" ಎಂದು ತಿಳಿಸಿದೆ.
"ಪ್ರಾಯೋಗಿಕ ಪರೀಕ್ಷೆಯ ಫಲಿತಾಂಶಗಳು 2-ಡಿಜಿ ಔಷಧ ಆಸ್ಪತ್ರೆಗೆ ದಾಖಲಾದ ರೋಗಿಗಳನ್ನು ವೇಗವಾಗಿ ಚೇತರಿಸಿಕೊಳ್ಳಲು ಸಹಾಯ ಮಾಡುತ್ತದೆ. 2-ಡಿಜಿಯೊಂದಿಗೆ ಚಿಕಿತ್ಸೆ ಪಡೆದುಕೊಂಡ ಸೋಂಕಿತರಿಗೆ ಆರ್ಟಿಪಿಸಿಆರ್ ಪರೀಕ್ಷೆಯಲ್ಲಿ ನೆಗೆಟಿವ್ ಬರುತ್ತಿದೆ" ಎಂದು ಡಿಆರ್ಡಿಒ ತಿಳಿಸಿದೆ.
"2020ರ ಎಪ್ರಿಲ್ನಲ್ಲಿ ಕೊರೊನಾ ಪ್ರಾರಂಭವಾಗಿದ್ದ ಸಂದರ್ಭ ಹೈದರಾಬಾದ್ನ ಸೆಂಟರ್ ಫಾರ್ ಸೆಲ್ಯುಲಾರ್ ಮತ್ತು ಮಾಲಿಕ್ಯೂಲರ್ ಬಯಾಲಜಿ ಪ್ರಯೋಗಾಲಯದಲ್ಲಿ ಐಎನ್ಎಂಎಎಸ್ಡಿಆರ್ಡಿಒ ವಿಜ್ಞಾನಿಗಳು ಪ್ರಯೋಗಗಳನ್ನು ಪ್ರಾರಂಭ ಮಾಡಿದ್ದರು. ಎಸ್ಎಆರ್ಎಸ್-ಕೋವಿ-2 ಸೋಂಕಿನ ವಿರುದ್ದ ಈ ಔಷಧ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ ಎನ್ನುವುದನ್ನು ಕಂಡುಹಿಡಿದಿದೆ" ಎಂದು ತಿಳಿಸಿದೆ.