ಇಂಧೋರ್, ಮೇ. 08 (DaijiworldNews/HR): ಇಂಧೋರ್ ನ ಮಹಾರಾಜ್ ಯಶವಂತರಾವ್ ಆಸ್ಪತ್ರೆಯಯಲ್ಲಿ ಕೊರೊನಾ ಸೋಂಕಿತ ರೋಗಿಗೆ ಕಿರುಕುಳ ನೀಡಿದ ಹಿನ್ನೆಲೆಯಲ್ಲಿ ಇಬ್ಬರು ವಾರ್ಡ್ ಬಾಯ್ಗಳನ್ನು ಪೊಲೀಸರು ಬಂಧಿಸಿದ ಘಟನೆ ನಡೆದಿದೆ.
ಸಾಂಧರ್ಭಿಕ ಚಿತ್ರ
ಬಂಧಿತ ಆರೋಪಿಗಳನ್ನು ಶುಭಂ ಮತ್ತು ಹೃದಯೇಶ್ ಎಂದು ಗುರುತಿಸಸಲಾಗಿದೆ.
ಕೊರೊನಾ ವಾರ್ಡ್ ವಿಭಾಗದಲ್ಲಿ ರೋಗಿಯೊಬ್ಬರಿಗೆ ಕಿರುಕುಳ ನೀಡಿದ್ದು, ಮೇ 5 ಮತ್ತು ಮೇ 6 ರ ಮಧ್ಯರಾತ್ರಿ ಈ ಘಟನೆ ನಡೆದಿದೆ ಎಂದು ಇಂದೋರ್ನ ಪೊಲೀಸ್ ವರಿಷ್ಠಾಧಿಕಾರಿ ಅಶುತೋಷ್ ಬಾಗ್ರಿ ತಿಳಿಸಿದ್ದಾರೆ.
ಇನ್ನು ತನಗೆ ಕಿರುಕುಳ ನೀಡಿದ ಕುರಿತು ಬಾಲಕಿ ತನ್ನ ಕುಟುಂಬ ಸದಸ್ಯರಿಗೆ ತಿಳಿಸಿದ್ದು, ಆ ವೇಳೆ ಇಬ್ಬರೂ ಆರೋಪಿಗಳು ಆಸ್ಪತ್ರೆಯಿಂದ ಪರಾರಿಯಾಗಿದ್ದರು.
ಈ ಬಗ್ಗೆ ಸನ್ಯೋಗಿತಗಂಜ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ಆರೋಪಿಗಳನ್ನು ಬಂಧಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.