ಬೆಂಗಳೂರು, ಮೇ. 08 (DaijiworldNews/HR): "ಇಡೀ ಸಮಾಜ , ದೇಶ, ವಿಶ್ವ ಕೊರೊನಾ ಸಾಂಕ್ರಾಮಿಕ ರೋಗ ನಿವಾರಣೆ ಮಾಡುವ ಕಡೆ ಗಮನ ಕೊಡುತ್ತಿದ್ದು, ಎಲ್ಲಾ ರೀತಿಯ ಸೌಕರ್ಯ ಅವಶ್ಯಕತೆಯಿದ್ದು, ಬೇಡಿಕೆಗೆ ತಕ್ಕಂತೆ ಅವಶ್ಯಕತೆಗಳನ್ನು ಒದಗಿಸುವ ಕೆಲಸ ಮಾಡಲಾಗುತ್ತಿದ್ದು, ಆರೋಗ್ಯ ಕೇಂದ್ರಗಳಿಗೆ ಯಾರು ಬರುವುದಕ್ಕೆ ಆಗಲ್ಲ ಅವರಿಗೆ ಮನೆಯಲ್ಲೇ ಚಿಕಿತ್ಸೆ ನೀಡುತ್ತೇವೆ" ಎಂದು ಡಿಸಿಎಂ ಅಶ್ವತ್ಥ್ ನಾರಾಯಣ್ ಹೇಳಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೆಮಿಡಿಸ್ವೇರ್ ಇಂಜೆಕ್ಷನ್ ಅಲಾಟ್ ಆಗಿದ್ದು, 70 ಸಾವಿರ ಡೋಸ್ ಬಾಕಿ ಇದೆ. ಇನ್ನೂ ಬೇಡಿಕೆ ಹೆಚ್ಚಾಗಿದೆ. ಮುಂದಿನ 16 ನೇ ತಾರೀಖಿನ ವರೆಗೂ ಬೇಡಿಕೆ ಇದೆ. ಪ್ರತಿ ದಿನ 37 ಸಾವಿರ ರೆಮಿಡಿಸ್ವೇರ್ ಡೋಸ್ ಇರುತ್ತೆ. ಈ ಕೋಟಾಗಳನ್ನು ಬಳಸಿಕೊಳ್ಳಲಾಗುತ್ತದೆ. ನಮಗೆ ಕೊಡದೆ ಇದ್ದರೆ ಆ ಕಂಪನಿಗಳಿಗೆ ನೋಟಿಸ್ ಕೊಡುತ್ತೇವೆ" ಎಂದರು.
"ಕರ್ನಾಟಕದ ಎಲ್ಲಾ ಕಡೆ 250 ಕೇಂದ್ರಗಳನ್ನು ಬಿಜೆಪಿ ವತಿಯಿಂದ ಎಲ್ಲಾ ಕಡೆ ಮಾಡಲಾಗುತ್ತಿದ್ದು, ಮಾನವ ಸಂಪನ್ಮೂಲ ಕೂಡ ಇಲ್ಲಿ ಬಳಕೆ ಆಗುತ್ತಿದೆ. ಇದು ಶ್ಲಾಘನೀಯ. ಇದಕ್ಕೆ ವ್ಯವಸ್ಥೆ ಮಾಡುವುದಕ್ಕೆ ಆಕ್ಸಿಜನ್ ಬೇಡಿಕೆ ಹೆಚ್ಚು ಆಗುತ್ತಿದೆ. ಕೊರೊನಾಗೆ 70 ಸಾವಿರ ಬೆಡ್ ನಿಗದಿಯಾಗಿದೆ. ಖಾಸಗಿಯಲ್ಲಿ 20 ಸಾವಿರ ಬೆಡ್ ಇದೆ. ಆಕ್ಸಿಜನ್ ಬೇಡಿಕೆ ಹೆಚ್ಚು ಇದೆ. ಇವತ್ತು 950 ಮೆಟ್ರಿಕ್ ಟನ್ ಆಕ್ಸಿಜನ್ ವ್ಯವಸ್ಥೆ ಮಾಡಲಾಗುತ್ತಿದೆ" ಎಂದರು.
"ಹೆಚ್ಚು ಆಕ್ಸಿಜನ್ ಬೆಡ್ ವ್ಯವಸ್ಥೆ ಮಾಡಲಾಗುತ್ತಿದ್ದು, 1200 ಮೆಟ್ರಿಕ್ ಟನ್ ಕೇಂದ್ರ ಸರ್ಕಾರ ಕೊಡುವುದಿದೆ. ಎಲ್ಲಾ ವೈದ್ಯಕೀಯ ಮೆಡಿಕಲ್ ಕಾಲೇಜು, ತಾಲ್ಲೂಕಿನ ಆಸ್ಪತ್ರೆಯಲ್ಲಿ ಬೆಡ್ ವ್ಯವಸ್ಥೆ ಹೆಚ್ಚಿಗೆ ಮಾಡಲಾಗುತ್ತೆ" ಎಂದಿದ್ದಾರೆ
ಇನ್ನು "ಆರೋಗ್ಯ ಕೇಂದ್ರಗಳಿಗೆ ಯಾರು ಬರುವುದಕ್ಕೆ ಆಗಲ್ಲ ಅವರಿಗೆ ಮನೆಗೆ ಟ್ರೀಟ್ಮೆಂಟ್ ನೀಡುತ್ತೇವೆ. ಟ್ರಾಸ್ಟಿಕ್ ಆಸ್ಪತ್ರೆಗಳನ್ನು ಮಾಡುತ್ತಿದ್ದೇವೆ. ಡಿಸ್ಚಾರ್ಜ್ , ಅಡ್ಮಿಟ್ ಮಾಡಿಕೊಳ್ಳುವಾಗ ಸಮಯ ವ್ಯರ್ಥ ಆಗುತ್ತಿತ್ತು ಆರ್ಟಿಪಿಸಿಆರ್ 1.50,000 ಸರ್ಕಾರದ ನೇತೃತ್ವದಲ್ಲಿ ಟೆಸ್ಟ್ ಆಗ್ತಿದ್ದು, ರ್ಯಾಡ್ ಟೆಸ್ಟ್ ಗಳನ್ನು ಮುಂದೆ ಮಾಡುತ್ತಿದ್ದೇವೆ. ಇದು ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಮಾಡುತ್ತೇವೆ" ಎಂದು ಹೇಳಿದ್ದಾರೆ.