ಕಲಬುರ್ಗಿ, ಮೇ.08 (DaijiworldNews/PY): "ರಾಜ್ಯದಲ್ಲಿ ಜನರು ಕೊರೊನಾ ಸೋಂಕಿಗೆ ಬಲಿಯಾಗುತ್ತಿದ್ದಾರೆ. ಆಕ್ಸಿಜನ್, ಲಸಿಕೆ ಇಲ್ಲದೇ ಪರದಾಡುತ್ತಿದ್ದಾರೆ. ರಾಜ್ಯದ 25 ಮಂದಿ ಸಂಸದರು ಬದುಕಿದ್ದಾರೆಯೇ ಅಥವಾ ಸತ್ತಿದ್ದಾರೆಯೇ?" ಎಂದು ಕೆಪಿಸಿಸಿ ವಕ್ತಾರ ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದ್ದಾರೆ.
ಕಲಬುರ್ಗಿಯಲ್ಲಿ ಮಾತನಾಡಿದ ಅವರು, "ಇಂತಹ ಸಂಕಷ್ಟದ ಸಂದರ್ಭದಲ್ಲಿ ಧ್ವನಿ ಎತ್ತದೇ ಇರುವವರು ಇನ್ನು ಯಾವಾಗ ಮಾತನಾಡುತ್ತಾರೆ. ಅವರು ರಾಜೀನಮೇ ನೀಡುವುದೇ ಸೂಕ್ತ. ಜನರು ಇವರನ್ನು ಕತ್ತೆ ಕಾಯಲೆಂದು ಆಯ್ಕೆ ಮಾಡಿ ಕಳುಹಿಸಿದ್ದಾರಾ?. ರಾಜ್ಯದ ಪರವಾಗಿ ಹೋರಾಡಲು ಇವರಿಗೆ ಎದೆಗಾರಿಕೆ ಇಲ್ಲ" ಎಂದು ಕಿಡಿಕಾರಿದ್ದಾರೆ.
"ಕೊರೊನಾ ಸೋಂಕಿತರು ಆಕ್ಸಿಜನ್ ಇಲ್ಲದೇ ಪರದಾಡುತ್ತಿದ್ದಾರೆ. ರಾಜ್ಯದ 25 ಸಂಸದರಿಗೆ, ಅತಿವೃಷ್ಟಿ, ಅನಾವೃಷ್ಟಿಯಿಂದ ಹಿಡಿದು ಆಕ್ಸಿಜನ್ ಸಂಕಷ್ಟದವರೆಗೂ ರಾಜ್ಯದ ಜನರ ಪರ ನಿಂತು ಮಾತನಾಡುವ ಎದೆಗಾರಿಗೆ ಇಲ್ಲದಂತಾಗಿದೆ" ಎಂದಿದ್ದಾರೆ.