ಬೆಂಗಳೂರು, ಮೇ 07 (DaijiworldNews/SM): ಮೇ 10ರಿಂದ ಮೇ 24ರ ತನಕ ರಾಜ್ಯಾದ್ಯಂತ ಲಾಕ್ ಡೌನ್ ಜಾರಿಗೊಳಿಸಲಾಗಿದೆ ಎಂದು ಸಿಎಂ ಬಿ.ಎಸ್. ಯಡಿಯೂರಪ್ಪ ಘೋಷಣೆ ಮಾಡಿದ್ದಾರೆ.
ಮೇ 10ರ ಬೆಳಿಗ್ಗೆ 6ರಿಂದ ಲಾಕ್ ಡೌನ್ ಜಾರಿಗೆ ಬರಲಿದೆ ಎಂದು ಸಿಎಂ ಯಡಿಯೂರಪ್ಪ ಘೋಷಿಸಿದ್ದಾರೆ. ಬೆಳಗ್ಗೆ 6 ಗಂಟೆಯಿಂದ 10 ಗಂಟೆಯ ತನಕ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ನೀಡಲಾಗಿದೆ. ಉಳಿದಂತೆ ಬಹುತೇಕ ಎಲ್ಲಾ ಚಟುವಟಿಕೆಗಳನ್ನು ನಿರ್ಬಂಧಿಸಲಾಗಿದೆ ಎಂದು ಸಿಎಂ ಘೋಷಿಸಿದ್ದಾರೆ.
ಏನೇನು ಇರಲಿದೆ?
ಬೆಳಿಗ್ಗಿನ 6 ಗಂಟೆಯಿಂದ ಬೆಳಗ್ಗಿನ 10 ಗಂಟೆ ತನಕ ಅಗತ್ಯ ವಸ್ತುಗಳು ಲಭ್ಯ
ಜಿಲ್ಲೆಯಿಂದ ಜಿಲ್ಲೆಗೆ ಓಡಾಟಕ್ಕೆ ಅವಕಾಶವಿಲ್ಲ
ತುರ್ತು ಸಂದರ್ಭದಲ್ಲಿ ಮಾತ್ರ ಅಂತರಾಜ್ಯ ಸಂಚಾರಕ್ಕೆ ಅವಕಾಶ
ಸರಕಾರಿ ಕಚೇರಿಗಳು ಭಾಗಶಃ ಕಾರ್ಯಾಚರಣೆಗೆ ಅವಕಾಶ
ಅಗತ್ಯ ವಸ್ತುಗಳ ಸಾಗಾಟ ವಾಹನ ಸಂಚಾರಕ್ಕೆ ಅವಕಾಶ
ಸ್ಥಳೀಯ ಕಾರ್ಮಿಕರನ್ನು ಬಳಸಿ ರಸ್ತೆ ಕಾಮಗಾರಿ ನಡೆಸಬಹುದು
ಬಾರ್, ರೆಸ್ಟೋರೆಂಟ್ ಗಳಲ್ಲಿ ಪಾರ್ಸೆಲ್ ಗೆ ಮಾತ್ರ ಅವಕಾಶ
ಆಸ್ಪತ್ರೆ, ಮೆಡಿಕಲ್ ಸೇವೆ ಲಭ್ಯವಿದೆ
ಕಾರ್ಖಾನೆಗಳು ಕೂಡ ಸಂಪೂರ್ಣ ಬಂದ್
ವಿಮಾನಯಾನಕ್ಕೆ ಅವಕಾಶವಿದೆ
ರೈಲು ಸಂಚಾರಕ್ಕೂ ಅವಕಾಶವಿದೆ
ಆಟೋ, ಟ್ಯಾಕ್ಸಿ ಮೂಲಕ ವಿಮಾನ, ರೈಲು ನಿಲ್ದಾಣಕ್ಕೆ ತೆರಳಲು ಅವಕಾಶ
ಮೆಟ್ರೋ ಸಂಚಾರಕ್ಕೆ ಅವಕಾಶ ಇಲ್ಲ
ಶಾಲೆ, ಕಾಲೇಜುಗಳು ಸಂಪೂರ್ಣ ಬಂದ್
ಆನ್ ಲೈನ್ ತರಗತಿಗಳಿಗೆ ಅವಕಾಶವಿದೆ
ಹೋಟೆಲ್, ರೆಸ್ಟೋರೆಂಟ್ ಗಳು ಬಂದ್
ಹೋಟೆಲ್ ಗಳಲ್ಲಿ ಕಿಚನ್ ಗಳು ಕಾರ್ಯಾಚರಿಸಬಹುದು
ಕೇವಲ ಪಾರ್ಸೆಲ್ ಗೆ ಅವಕಾಶ ನೀಡಲಾಗಿದೆ
ವಾಹನದ ಮೂಲಕ ಬಂದು ಪಾರ್ಸೆಲ್ ತೆಗೆದುಕೊಳ್ಳಲು ಅವಕಾಶ ಇಲ್ಲ
ನಡೆದುಕೊಂಡು ಹೋಗಿ ಪಾರ್ಸೆಲ್ ತರಲು ಅವಕಾಶ ಇದೆ
ಉಳಿದಂತೆ ಆನ್ ಲೈನ್ ಮೂಲಕವೇ ಪಾರ್ಸೆಲ್ ಪಡೆಯಬೇಕು
ಎಲ್ಲಾ ರೀತಿಯ ಧಾರ್ಮಿಕ, ಸಾಮಾಜಿಕ, ರಾಜಕೀಯ ಆಚರಣೆಗಳು ಬಂದ್
ಸಾರಿಗೆ ಬಸ್ ಗಳ ಸಂಚಾರ ಸಂಪೂರ್ಣ ಬಂದ್
ತುರ್ತು ಸಂದರ್ಭಗಳಲ್ಲಿ ಮಾತ್ರ ಆಟೋ ಟ್ಯಾಕ್ಸಿಗಳು ಸಂಚಾರ ನಡೆಸಬಹುದು
ಧಾರ್ಮಿಕ ಕೇಂದ್ರಗಳಿಗೆ ಸಾರ್ವಜನಿಕ ಪ್ರವೇಶಕ್ಕೆ ಅವಕಾಶವಿಲ್ಲ
ಸಿನಿಮಾ ಹಾಲ್, ಯೋಗ ಶಾಲೆ, ಜಿಮ್, ಸ್ಪಾ, ಶಾಪಿಂಗ್ ಮಾಲ್ ಬಂದ್
ಕೃಷಿ ಸಂಬಂಧಿಸಿದ ಚಟುವಟಿಕೆಗಳಿಗೆ ಅವಕಾಶ
ಮದ್ಯ ಪಾರ್ಸೆಲ್ ಪಡೆಯಲು ಅವಕಾಶವಿದೆ
ಮೀನು, ಮಾಂಸ, ಹಾಲು ಬೆಳಗ್ಗಿನ ಸಂದರ್ಭ ಲಭ್ಯ