ನವದೆಹಲಿ, ಮೇ.07 (DaijiworldNews/HR): ಕೊರೊನಾ ಲಸಿಕೆಗಳು ಮತ್ತು ಔಷಧಿಗಳ ಕೈಗೆಟುಕುವ ಬೆಲೆ ಮತ್ತು ಸಮಾನ ಹಂಚಿಕೆಯನ್ನು ಖಾತರಿಪಡಿಸುವ ಕುರಿತ ಮಹತ್ವದ ಕ್ರಮಕ್ಕೆ ಭಾರತ ಮತ್ತು ಆಸ್ಟ್ರೇಲಿಯಾದ ಪ್ರಧಾನಿಗಳು ಒಪ್ಪಿಗೆ ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ.
ಈ ಕುರಿತು ಶುಕ್ರವಾರ ಆಸ್ಟ್ರೇಲಿಯಾದ ಪ್ರಧಾನಿ ಸ್ಕಾಟ್ ಮಾರಿಸನ್ ಅವರೊಂದಿಗೆ ಭಾರತದ ಪ್ರಧಾನಿ ನರೇಂದ್ರ ಮೋದಿ ದೂರವಾಣಿಯಲ್ಲಿ ಮಾತುಕತೆ ನಡೆಸಿದ್ದಾರೆ.
ಇನ್ನು ಇಂಡೋ ಫೆಸಿಫಿಕ್ ಪ್ರಾಂತ್ಯವನ್ನೊಳಗೊಂಡ ಪ್ರದೇಶದಲ್ಲಿ ಭಾರತ ಮತ್ತು ಆಸ್ಟ್ರೇಲಿಯಾವು ನಿಯಮಾಧಾರಿತ ಅಂತರರಾಷ್ಟ್ರೀಯ ಆದೇಶ ಮತ್ತು ಮುಕ್ತ ಹಾಗೂ ಅಂತರ್ಗತವಾಗಿ ಒಟ್ಟಾಗಿ ಕಾರ್ಯನಿರ್ವಹಿಸುವ ಮಹತ್ವವನ್ನು ಪ್ರತಿಪಾದಿಸಿದವು ಎನ್ನಲಾಗಿದೆ.
ಈ ಕುರಿತು ಟ್ವೀಟ್ ಮಾಡಿರುವ ಪ್ರಧಾನಿ ಮೋದಿ, "ಲಸಿಕೆ ಮತ್ತು ಔಷಧಿಗಳು ಕೈಗೆಟುಕುವ ದರ ಮತ್ತು ಸಮಾನ ಲಭ್ಯತೆಯನ್ನು ಖಾತರಿಪಡಿಸುವ ಮಹತ್ವವನ್ನು ನಾವು ಒಪ್ಪಿಕೊಂಡಿದ್ದು, ಈ ನಿಟ್ಟಿನಲ್ಲಿ ಕೈಗೊಳ್ಳಬಹುದಾದ ಮುಂದಿನ ಉಪಕ್ರಮಗಳ ಬಗ್ಗೆಯೂ ಚರ್ಚಿಸಿದ್ದೇವೆ" ಎಂದು ಹೇಳಿದ್ದಾರೆ.