ಬೆಂಗಳೂರು, ಮೇ.07 (DaijiworldNews/HR): ಕೆಲವೊಂದು ಆಸ್ಪತ್ರೆಗಳಲ್ಲಿ ಮೃತಪಟ್ಟ ವ್ಯಕ್ತಿಗಳ ಹೆಸರಿನಲ್ಲಿ ಬೆಡ್ ಮುಂದುವರೆಸುತ್ತಿರುವುದರ ಕುರಿತು ಪರಿಶೀಲನೆ ನಡೆಸಿ, ಕಠಿಣ ಕ್ರಮ ಕೈಗೊಳ್ಳುತ್ತಿದ್ದು, ಅಂತಹ ಖಾಸಗಿ ಆಸ್ಪತ್ರೆಗಳ ಹೆಸರನ್ನು ನಾಳೆ ಬಹಿರಂಗ ಪಡಿಸಲಾಗುವುದು" ಎಂದು ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಹಾಸಿಗೆ ವ್ಯವಸ್ಥೆ ಜವಾಬ್ದಾರಿ ಹೊತ್ತಿರುವ ಕಂದಾಯ ಸಚಿವ ಆರ್.ಅಶೋಕ್ ಹೇಳಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, " ಕಣ್ಣಾ ಮುಚ್ಚಾಲೇ ಆಟ ಬಿಟ್ಟು ಖಾಸಗಿ ಆಸ್ಪತ್ರೆಗಳು ಸರ್ಕಾರಕ್ಕೆ ನೀಡಬೇಕಾದ ಹಾಸಿಗೆಗಳನ್ನು ಕೊಡಬೇಕೆಂದು ಸೂಚನೆ ನೀಡಿದ್ದು, ಇನ್ನೆರಡು ದಿನದಲ್ಲಿ ಕೊಡದಿದ್ದರೆ ಓಪಿಡಿ ಬಂದ್ ಮಾಡಿಸುವುದಾಗಿ" ಎಚ್ಚರಿಕೆ ನೀಡಿದ್ದಾರೆ.
ಇನ್ನು ಬಿಬಿಎಂಪಿಯಿಂದ ಬಿಯೂ ನಂಬರ್ ನೀಡಿದರೂ ಬೆಡ್ ಖಾಲಿ ಆಗಿಲ್ಲ ಎಂದು ರೋಗಿಗಳನ್ನು ಹೊರಗೆ ಇರಿಸುವ ಕೆಲಸ ಆಗುತ್ತಿದ್ದು, ಸೋಂಕಿತರನ್ನು ಆಸ್ಪತ್ರೆಯ ಒಳಗೆ ಇರಿಸಬೇಕು. ತಪಾಸಣೆಗೆ ಆಸ್ಪತ್ರೆಗಳು ಹೆಚ್ಚಿನ ಶುಲ್ಕ ಪಡೆಯಬಾರದೆಂದು ಈಗಾಗಲೇ ಸೂಚನೆ ನೀಡಿದ್ದು, ಇದಕ್ಕಾಗಿ ಕೆಲವು ಅಧಿಕಾರಿಗಳನ್ನ ಬದಲಾವಣೆ ಮಾಡಿದ್ದೇವೆ" ಎಂದು ಹೇಳಿದ್ದಾರೆ.