ಶ್ರೀನಗರ, ಮೇ.07 (DaijiworldNews/PY): ಶ್ರೀನಗರದ ನವಾಬ್ ಬಜಾರ್ ಚೌಕ್ನಲ್ಲಿ ಸಿಆರ್ಪಿಎಫ್ನ ನಿಯೋಜನಾ ಪಡೆಯ ಮೇಲೆ ಅಪರಿಚಿತ ವ್ಯಕ್ತಿಗಳು ಗ್ರೆನೇಡ್ ದಾಳಿ ನಡೆಸಿದ್ದು, ಸಿಆರ್ಪಿಎಫ್ನ ಇಬ್ಬರು ಸೈನಿಕರು, ಓರ್ವ ಪೊಲೀಸ್ ಸಿಬ್ಬಂದಿ ಹಾಗೂ ಓರ್ವ ನಾಗರಿಕ ಗಾಯಗೊಂಡಿದ್ದಾರೆ.
ಶ್ರೀನಗರದ ನವಾಬ್ ಬಜಾರ್ ಚೌಕ್ನಲ್ಲಿ ಈ ಘಟನೆ ನಡೆದಿದ್ದು, ಸಿಆರ್ಪಿಎಫ್ನ ಇಬ್ಬರು ಸೈನಿಕರು, ಓರ್ವ ಪೊಲೀಸ್ ಸಿಬ್ಬಂದಿ ಹಾಗೂ ಓರ್ವ ನಾಗರಿಕ ಗಾಯಗೊಂಡಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಗಾಯಗೊಂಡವರ ಸ್ಥಿತಿ ಸ್ಥಿರವಾಗಿದೆ. ದಾಳಿಯ ಬಳಿಕ ಈ ಪ್ರದೇಶವನ್ನು ಪೊಲೀಸ್ ಸಿಬ್ಬಂದಿಗಳು ಸುತ್ತುವರೆದಿದ್ದಾರೆ ಎನ್ನಲಾಗಿದೆ.