ದೆಹಲಿ, ಮೇ 07 (DaijiworldNews/MS): "ದಾವುದ್ ಇಬ್ರಾಹಿಂ ಸಹಚರ ಹಾಗೂ ಭೂಗತ ಪಾತಕಿ ಛೋಟಾ ರಾಜನ್ ಮೃತಪಟ್ಟಿಲ್ಲ ಜೀವಂತವಾಗಿದ್ದಾರೆ" ಎಂದು ಏಮ್ಸ್ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಛೋಟಾ ರಾಜನ್ ಅವರು ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಕೊರೊನಾ ಸೋಂಕಿನಿಂದ ಮೇ 7ರ ಶುಕ್ರವಾರ ಮೃತಪಟ್ಟಿದ್ದಾರೆ ಎಂದು ವರದಿಯಾಗಿತ್ತು. ಈ ರೀತಿಯ ವರದಿಗಳ ಬೆನ್ನಲ್ಲೇ ಏಮ್ಸ್ ಆಸ್ಪತ್ರೆಯ ಅಧಿಕಾರಿಗಳು ಸ್ಪಷ್ಟನೆ ನೀಡಿದ್ದು, "ಛೋಟಾ ರಾಜನ್ ಅವರು ಮೃತಪಟ್ಟಿಲ್ಲ ಇನ್ನೂ ಬದುಕಿದ್ದಾರೆ" ಎಂದು ತಿಳಿಸಿದ್ದಾರೆ.
ತಿಹಾರ್ ಜೈಲಿನಲ್ಲಿ ಸೆರೆವಾಸ ಅನುಭವಿಸುತ್ತಿದ್ದ ಛೋಟಾ ರಾಜನ್ ಗೆ ಕೊರೊನಾ ಸೋಂಕು ದೃಡಪಟ್ಟ ಹಿನ್ನೆಲೆಯಲ್ಲಿ ಏಪ್ರಿಲ್ 26ರಂದು ದೆಹಲಿಯ ಏಮ್ಸ್ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿತ್ತು.