ಚೆನ್ನೈ, ಮೇ.07 (DaijiworldNews/HR): ತಮಿಳುನಾಡು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಕೆಲವೇ ಸಮಯದಲ್ಲಿ ಎಂ.ಕೆ. ಸ್ಟಾಲಿನ್ ಅವರು ರಾಜ್ಯದ ಜನತೆಗೆ ಬಂಪರ್ ಕೊಡುಗೆಗಳನ್ನು ಘೋಷಣೆ ಮಾಡಿದ್ದಾರೆ.
ರೈಸ್ ರೇಷನ್ ಕಾರ್ಡ್ ದಾರರ ಪ್ರತಿ ಕುಟುಂಬಕ್ಕೆ 4 ಸಾವಿರ ರೂಪಾಯಿ ಸಹಾಯಧನ ನೀಡುವುದಾಗಿ ತಿಳಿಸಿದ್ದು, ಅದರಲ್ಲಿ 2000 ರೂ. ಮೇ ತಿಂಗಳಲ್ಲಿ ಹಾಗೂ ಉಳಿದ ಹಣವನ್ನು ಮುಂದಿನ ದಿನಗಳಲ್ಲಿ ಹಂಚಲಾಗುವುದು" ಎಂದಿದ್ದಾರೆ.
ಇನ್ನು ತಮಿಳುನಾಡಿದ ಸರ್ಕಾರಿ ಸಾರಿಗೆ ಬಸ್ ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ, ಹಾಲಿನ ಪ್ಯಾಕೆಟ್ ಬೆಲೆಯಲ್ಲಿ 3 ರೂಪಾಯಿ ಕಡಿತ, ಕೊರೊನಾ ಸೋಂಕಿತರು ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುವ ವೆಚ್ಚ ಸಿಎಂ ವಿಮಾ ಯೋಜನೆ ವ್ಯಾಪ್ತಿಗೆ ಹಾಗೂ ಪ್ರಚಾರದ ವೇಳೆ ನೀಡಿದ ಭರವಸೆ ಈಡೇರಿಕೆ, ಜನರ ಕುಂದುಕೊರತೆಗಳನ್ನು ನೂರು ದಿನಗಳಲ್ಲಿ ಪರಿಹರಿಸಲು ಹೊಸ ಸಚಿವಾಲಯದ ರಚನೆ ಹಾಗೂ ಇನ್ನಿತರ ನಿರ್ಧಾರಕ್ಕೆ ಸಹಿ ಹಾಕಿದ್ದಾರೆ ಎಂದು ವರದಿಯಾಗಿದೆ.