ನವದೆಹಲಿ, ಮೇ.07 (DaijiworldNews/PY): "ಕೇಂದ್ರ ಸರ್ಕಾರದ ವೈಫಲ್ಯದಿಂದ ದೇಶ ಮತ್ತೊಮ್ಮೆ ಲಾಕ್ಡೌನ್ನತ್ತ ಸಾಗುವಂತಾಗಿದೆ. ಈ ನಿಟ್ಟಿನಲ್ಲಿ ಬಡ ಜನರಿಗೆ ಆರ್ಥಿಕ ಹಾಗೂ ಆಹಾರದ ನೆರವು ನೀಡಬೇಕು" ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತಿಳಿಸಿದ್ದಾರೆ.
ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿರುವ ರಾಹುಲ್ ಗಾಂಧಿ, "ಲಾಕ್ಡೌನ್ನಿಂದ ಆರ್ಥಿಕತೆ ಉಂಟಾಗುವ ಪರಿಣಾಮಗಳ ಬದಲಾಗಿ ಕೊರೊನಾದಿಂದ ಜನರ ಮೇಲಾಗುವ ಪರಿಣಾಮಗಳ ಬಗ್ಗೆ ಗಮಹರಿಸಬೇಕು" ಎಂದಿದ್ದಾರೆ.
"ಕೊರೊನಾ ಲಸಿಕೆಯ ಕೊರತೆಯ ಕಾರಣದಿಂದ ಹಾಗೂ ಕೊರೊನಾ ನಿಯಂತ್ರಿಸುವಲ್ಲಿ ಸರ್ಕಾರ ವಿಫಲವಾಗಿದೆ. ದಿನೇ ದಿನೇ ಸೋಂಕು ಹೆಚ್ಚಾಗುತ್ತಿದೆ. ದೇಶ ಮತ್ತೊಮ್ಮೆ ಲಾಕ್ಡೌನ್ನತ್ತ ಸಾಗುವಂತಾಗಿದೆ" ಎಂದು ಕಿಡಿಕಾರಿದ್ದಾರೆ.
"ಒಂದುವೇಳೆ ಲಾಕ್ಡೌನ್ ಜಾರಿ ಮಾಡಿದರೆ, ಜನತೆ ಸಿದ್ದರಾಗಿರುವುದು ಮುಖ್ಯ. ಇಂತಹ ಪರಿಸ್ಥಿತಿಯಲ್ಲಿ ಸರ್ಕಾರ ಪ್ರತೀ ಬಡಕುಟುಂಬಗಳಿಗೆ 6,000 ರೂ. ಅನ್ನು ನೀಡಬೇಕು" ಎಂದು ಒತ್ತಾಯಿಸಿದ್ದಾರೆ.
"ಕಳೆದ ವರ್ಷ ಲಾಕ್ಡೌನ್ ಸಂದರ್ಭ ಜನರು ಸಂಕಷ್ಟಕ್ಕೆ ಒಳಗಾಗಿದ್ದರು. ಆದರೆ, ಈ ಬಾರಿ ಆ ರೀತಿಯಾಗಬಾರದು. ಸರ್ಕಾರ ಸಹಾನುಭೂತಿಯಿಂದ ವರ್ತಿಸಬೇಕು. ಅಲ್ಲದೇ, ದುರ್ಬಲರಿಗೆ ಆರ್ಥಿಕ ಹಾಗೂ ಆಹಾರದ ನೆರವನ್ನು ಒದಗಿಸಬೇಕು. ಇದಕ್ಕೆ ಸಾರಿಗೆ ವ್ಯವಸ್ಥೆಯ ಅವಶ್ಯಕತೆ ಇದಲ್ಲಿ ಅದಕ್ಕೂ ಸಿದ್ದವಾಗಿರಬೇಕು" ಎಂದಿದ್ದಾರೆ.
"ದೇಶದ ಜನತೆಯನ್ನು ಸಂಕಷ್ಟದಿಂದ ಪಾರು ಮಾಡಲು ಬೇಕಾದ ಎಲ್ಲಾ ವ್ಯವಸ್ಥೆಯನ್ನು ಮಾಡಬೇಕು. ದೇಶದ ಜನತೆಗೆ ಶೀಘ್ರವಾಗಿ ಲಸಿಕೆಯನ್ನು ನೀಡಬೇಕು" ಎಂದು ಒತ್ತಾಯಿಸಿದ್ದಾರೆ.
"ಸರ್ಕಾರ ಪಾರದರ್ಶಕವಾಗಿರಬೇಕು. ಅಲ್ಲದೇ, ನಮ್ಮ ಸಂಶೋಧನೆಗಳ ಬಗ್ಗೆ ಜಗತ್ತಿಗೂ ತಿಳಿಸಬೇಕು" ಎಂದಿದ್ದಾರೆ.
"ಲಾಕ್ಡೌನ್ನ ಆರ್ಥಿಕ ಪ್ರಭಾವದ ಬಗ್ಗೆ ನೀವು ಕಾಳಜಿ ವಹಿಸುತ್ತಿದ್ದೀರಿ ಎಂದು ನನಗೆ ತಿಳಿದಿದೆ. ಕೊರೊನಾದಿಂದ ಮತ್ತಷ್ಟು ದುರಂತ ಸಂಭವಿಸದಿರಲಿ" ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.