ನವದೆಹಲಿ, ಮೇ.07 (DaijiworldNews/HR): ವಿವಿಧ ರಾಜ್ಯಗಳಿಗೆ ಮೇ 10ರಿಂದ 16ರವರೆಗಿನ ಬಳಕೆಗಾಗಿ 19.2 ಲಕ್ಷ ರೆಮಿಡಿಸಿವಿರ್ ಇಂಜೆಕ್ಷನ್ ವಯಲ್ಸ್ ಗಳನ್ನು ಕೇಂದ್ರ ಸರ್ಕಾರ ಹಂಚಿಕೆ ಮಾಡಿದೆಲಾಗಿದೆ" ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಡಿ. ವಿ. ಸದಾನಂದಗೌಡ ಹೇಳಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ವಿವಿಧ ರಾಜ್ಯಗಳಿಗೆ ಮೇ 10ರಿಂದ 16ರವರೆಗಿನ ಬಳಕೆಗಾಗಿ 19.2 ಲಕ್ಷ ರೆಮ್ಡೆಸಿವಿರ್ 'ವಯಲ್ಸ್'ಗಳನ್ನು ಹಂಚಿಕೆ ಮಾಡಿದ್ದೇವೆ. ಈ ಪೈಕಿ ಕರ್ನಾಟಕಕ್ಕೆ 2,62,346 ವಯಲ್ಸ್ (13.6%) ಒದಗಿಸಲಾಗಿದ್ದು, ಏಪ್ರಿಲ್ 21ರಿಂದ ವಿವಿಧ ರಾಜ್ಯಗಳಿಗೆ ಒಟ್ಟು 53 ಲಕ್ಷ ವಯಲ್ಸ್ ಹಂಚಿಕೆ ಮಾಡಲಾಗಿದೆ" ಎಂದು ತಿಳಿಸಿದ್ದಾರೆ.
ಇನ್ನು "ರೆಮಿ ಡಿಸಿವಿರ್ ಹಂಚಿಕೆಯನ್ನು 2,62,346 ವಯಲ್ಸ್ ಗೆ ಹೆಚ್ಚಿಸಿರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸುತ್ತೇನೆ. ರಾಜ್ಯದ ಮನವಿಗೆ ಸ್ಪಂದಿಸಿ ಅಗತ್ಯ ಔಷಧ ಪೂರೈಸುತ್ತಿರುವ ಕೇಂದ್ರ ಸಚಿವ ಡಿ. ವಿ. ಸದಾನಂದಗೌಡ ಅವರಿಗೆ ಧನ್ಯವಾದಗಳು" ಎಂದು ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಟ್ವೀಟ್ ಮಾಡಿದ್ದಾರೆ.