ನವದೆಹಲಿ, ಮೇ.07 (DaijiworldNews/PY): ಪ್ರಸಿದ್ದ ಸಿತಾರ್ ವಾದಕ ಪ್ರತೀಕ್ ಚೌಧರಿ (49) ಅವರು ಕೊರೊನಾಗೆ ಮೃತಪಟ್ಟಿದ್ದಾರೆ.
"ಕೊರೊನಾ ಸೋಂಕಿನಿಂದ ಬಳಲುತ್ತಿದ್ದ ಪ್ರತೀಕ್ ಅವರನ್ನು ಗುರು ತೇಜ್ ಬಹದ್ದೂರ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಅವರು ಮೃತಪಟ್ಟಿದ್ದಾರೆ" ಎಂದು ಸಂಗೀತ ತಜ್ಞ ಪವನ್ ಜಾ ಹೇಳಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಪವನ್ ಜಾ ಅವರು, "ಪ್ರಸಿದ್ದ ಸಿತಾರ್ ವಾದಕರಾಗಿದ್ದ ಪ್ರತೀಕ್ ಅವರು ತಂದೆಯ ಸಂಗೀತದ ಹಾದಿಯಲ್ಲೇ ನಡೆದಿದ್ದರು" ಎಂದು ತಿಳಿಸಿದ್ದಾರೆ.
ಕಳೆದ ವಾರ ಪ್ರತೀಕ್ ಅವರ ತಂದೆ ಸಂಗೀತ ವಿದ್ವಾಂಸ ದೇವ್ಬ್ರತಾ ಚೌಧರಿ ಅವರು ಡೆಬು ಚೌಧರಿ ಎಂದೇ ಪ್ರಸಿದ್ದರಾಗಿದ್ದರು, ಕಳೆದ ಶನಿವಾರ ಅವರು ಕೊರೊನಾಗೆ ಬಲಿಯಾಗಿದ್ದರು.