ಬೆಂಗಳೂರು, ಮೇ 07 (DaijiworldNews/MS):ಕನ್ನಡದ ಸಿನಿಮಾ ರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದ ಕನ್ನಡದ ಹಿರಿಯ ನಟ ಶಂಖನಾದ ಅರವಿಂದ್ ಅವರು ಕೊರೊನಾ ಸೋಂಕಿಗೆ ತುತ್ತಾಗಿ ನಿಧನರಾಗಿದ್ದಾರೆ.
ಕಳೆದ ಹತ್ತು ದಿನಗಳಿಂದ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರಿಗೆ 70 ವರ್ಷ ವಯಸ್ಸಾಗಿತ್ತು. ಜ.೨೩ ರಂದು ಅರವಿಂದ್ ಅವರು ಕೂಡಾ ಉಸಿರಾಟದ ಸಮಸ್ಯೆಯಿಂದ ಸಾವನ್ನಪ್ಪಿದ್ದರು.
ಅನುಭವ, ಬೆಟ್ಟದ ಹೂ, ಕಾಡಿನ ಬೆಂಕಿ, ಪ್ರಥಮ ಉಷಾಕಿರಣ, ಮುಂತಾದ ಹಲವು ಸಿನಿಮಾದಲ್ಲಿ ಅಭಿನಯಿಸಿದ್ದ ಅವರು, ೭೦-೮೦ ರ ದಶಕದಲ್ಲಿ ಬಹುಬೇಡಿಕೆಯ ಕಲಾವಿದರಾಗಿದ್ದರು.
ಶಂಖನಾದ ಸಿನಿಮಾದಲ್ಲಿ ದಾಸಯ್ಯನ ಪಾತ್ರದ ಮೂಲಕ ಅಭಿನಯಿಸಿದ ಸಲುವಾಗಿ ಅವರ ಹೆಸರಿನ ಮುಂದೆ ಶಂಖನಾದ ಎನ್ನುವ ಹೆಸರು ಕೂಡ ಸೇರಿಕೊಂಡಿತ್ತು.