ನವದೆಹಲಿ, ಮೇ.07 (DaijiworldNews/HR): "ದೇಶದಲ್ಲಿ ಕೊರೊನಾ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದ್ದು, ಸೋಂಕಿನ ವಿರುದ್ಧದ ಹೋರಾಟವು ರಾಜಕೀಯ ಭಿನ್ನಾಭಿಪ್ರಾಯಗಳನ್ನು ಮೀರಿದ್ದಾಗಿದ್ದು, ಎಲ್ಲರೂ ರಾಷ್ಟ್ರಮಟ್ಟದಲ್ಲಿ ಒಟ್ಟಾಗಿ ಹೋರಾಡಬೇಕಾಗಿದೆ" ಎಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಹೇಳಿದ್ದಾರೆ.
ಈ ಕುರಿತು ಶುಕ್ರವಾರ ನಡೆದ ಕಾಂಗ್ರೆಸ್ ಸಂಸದೀಯ ಪಕ್ಷದ ಸಭೆಯಲ್ಲಿ(ಸಿಪಿಪಿ) ಮಾತನಾಡಿದ ಅವರು, "ಕೊರೊನಾ ನಿರ್ವಹಣೆಗೆ ಪ್ರಧಾನಿ ಮೋದಿಯವರು ತುರ್ತಾಗಿ ಸರ್ವಪಕ್ಷ ಸಭೆ ಕರೆದು ಚರ್ಚೆ ನಡೆಸಬೇಕು, ಜೊತೆಗೆ ಕೊರೊನಾದ ವಿರುದ್ಧ ಹೋರಾಡಲು ಸಾಮೂಹಿಕ ಕ್ರಮ ಹಾಗೂ ನಿಯಂತ್ರಣಕ್ಕೆ ತರಲು ಸ್ಥಾಯಿ ಸಮಿತಿಯನ್ನು ರಚಿಸಬೇಕು" ಎಂದು ಒತ್ತಾಯಿಸಿದರು.
ಇನ್ನು "ಇತ್ತಿಚೆಗೆ ನಡೆದ ಚುನಾವಣೆಯಲ್ಲಿನ ಹಿನ್ನಡೆಯನ್ನು ಪಕ್ಷದಲ್ಲಿ ನಾವು ಸಾಮೂಹಿಕವಾಗಿ, ಪ್ರಾಮಾಣಿಕವಾಗಿ ನಮ್ರತೆಯಿಂದ ಸ್ವೀಕರಿಸೋಣ, ಇತ್ತೀಚಿನ ಚುನಾವಣೆಯಲ್ಲಿ ಕಾಂಗ್ರೆಸ್ನ ಕಳಪೆ ಸಾಧನೆ ತೀರಾ ಬೇಸರ ತಂದಿದೆ" ಎಂದು ಹೇಳಿದ್ದಾರೆ.