ನವದೆಹಲಿ, ಮೇ.07 (DaijiworldNews/HR): ಹೊಸ ಸಂಸತ್ ಭವನ ಮತ್ತು ಪ್ರಧಾನಿ ನಿವಾಸವನ್ನು ನಿರ್ಮಿಸುವ 'ಸೆಂಟ್ರಲ್ ವಿಸ್ತಾ' ಯೋಜನೆಯನ್ನು 'ಕ್ರಿಮಿನಲ್ ವೇಸ್ಟೇಜ್' ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟೀಕಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, "ಸೆಂಟ್ರಲ್ ವಿಸ್ತಾ ಯೋಜನೆ ಒಂದು ಕ್ರಿಮಿನಲ್ ವೇಸ್ಟೇಜ್. ಇಂಥ ಸಮಯದಲ್ಲಿ ಜನರ ಜೀವ ಮುಖ್ಯವಾಗಬೇಕೇ ಹೊರತು ಹೊಸ ನಿವಾಸ (ಸೆಂಟ್ರಲ್) ಬೇಕೆಂಬ ನಿಮ್ಮ ಹಟ ಮುಖ್ಯವಾಗಬಾರದು" ಎಂದಿದ್ದಾರೆ.
ಇನ್ನು ಸೆಂಟ್ರಲ್ ವಿಸ್ತಾ ಯೋಜನೆಯಡಿ ನೂತನ ಸಂಸತ್ತಿನ ಭವನ ನಿರ್ಮಾಣ, ರಾಷ್ಟ್ರಪತಿ ಭವನದಿಂದ ಇಂಡಿಯಾ ಗೇಟ್ವರೆಗಿನ ಮೂರು ಕಿ.ಮೀ ಉದ್ದದ ರಾಜಪತ್ ನವೀಕರಣ ಮತ್ತು ಪ್ರಧಾನಿ ಮತ್ತು ಉಪ ರಾಷ್ಟ್ರಪತಿಯವರ ನೂತನ ನಿವಾಸಗಳ ನಿರ್ಮಾಣ ಮಾಡಲಾಗುತ್ತಿದ್ದು, ಈ ಯೋಜನೆಯನ್ನು ಕಾರ್ಯಗತಗೊಳಿಸಲು ಕೇಂದ್ರ ಲೋಕೋಪಯೋಗಿ ಇಲಾಖೆ ಈ ಹಿಂದೆ ನಿಗದಿಪಡಿದ್ದ 11,794 ಕೋಟಿ ಅಂದಾಜು ವೆಚ್ಚವನ್ನು ಪರಿಷ್ಕರಿಸಿದ್ದು, ಪರಿಷ್ಕೃತ ಅಂದಾಜು ವೆಚ್ಚ 13,450 ಕೋಟಿ. ಎನ್ನಲಾಗಿದೆ.