ಮೈಸೂರು, ಮೇ. 06 (DaijiworldNews/HR): ಕೊರೊನಾ ಸೋಂಕಿತರು ಮನೆಯಿಂದ ಹೊರಗೆ ಬಂದರೆ ಅವರ ವಿರುದ್ಧ ಎಫ್ಐಆರ್ ದಾಖಲಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ ಸೋಮಶೇಖರ್ ಎಚ್ಚರಿಕೆ ನೀಡಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಕೆಲವರು ಟೆಸ್ಟ್ ಕೊಟ್ಟು ಪಾಸಿಟಿವ್ ಬಂದ ಬಳಿಕ ಮೊಬೈಲ್ ಸ್ವಿಚ್ ಆಫ್ ಮಾಡಿಕೊಳ್ಳುತ್ತಿದ್ದು, . ಅಂತವರ ಲೊಕೇಶನ್ ಪತ್ತೆ ಹಚ್ಚಬೇಕು" ಎಂದು ಪೊಲೀಸರಿಗೆ ಸೂಚನೆ ನೀಡಿದ್ದಾರೆ.
ಇನ್ನು "ಬೆಳಿಗ್ಗೆ 06 ರಿಂದ 10 ಗಂಟೆವರೆಗೆ ಅವಕಾಶ ನೀಡಿರುವುದು ಸಮಸ್ಯೆಯಾಗಿದ್ದು, ಪ್ರತಿದಿನವೂ ತರಕಾರಿ ಅಂಗಡಿ ಓಪನ್ ಆಗುತ್ತಿವೆ. ಆದರೆ ಜನ ವರ್ಷಪೂರ್ತಿ ಲಾಕ್ಡೌನ್ ಆಗಿದೆಯೆನೋ ಎನ್ನುವ ಹಾಗೆ ಕ್ಯೂ ನಿಲ್ಲುತ್ತಿರೋದು ಸಮಸ್ಯೆಯಾಗಿದೆ" ಎಂದರು.
ಮೇ.14ರ ವರೆಗೂ ಈ ನಿಯಮವೇ ಮುಂದುವರೆಯುಲಿದ್ದು, ಮೇ13 ರ ಸಂಜೆ ಮುಂದೆ ಏನು ಮಾಡಬೇಕು ಎನ್ನುದನ್ನು ಮುಖ್ಯಮಂತ್ರಿ ತಿರ್ಮಾನ ಮಾಡುತ್ತಾರೆ ಎಂದು ಹೇಳಿದ್ಡಾರೆ.