ಛತ್ತೀಸಗಢ, ಮೇ. 06 (DaijiworldNews/HR): ಭಾರತದಲ್ಲಿ ಕೊರೊನಾ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದ್ದು, ಈ ನಡುವೆ ಛತ್ತೀಗಢದಲ್ಲಿ ಹೋಮಿಯೊಪಥಿ ಔಷಧಿ ಸೇವಿಸಿ ಒಂದೇ ಕುಟುಂಬದ 8 ಮಂದಿ ಸಾವನ್ನಪ್ಪಿರುವ ಘಟನೆ ನಡೆದಿದೆ.
ಸಾಂಧರ್ಭಿಕ ಚಿತ್ರ
ಹೋಮಿಯೋಪಥಿ ಔಷಧಿ ಸೇವಿಸಿ ಎಂಟು ಮಂದಿ ಛತ್ತೀಸಗಡದ ಬಿಲಾಸ್ ಪುರ್ನಲ್ಲಿ ಸಾವನ್ನಪ್ಪಿದ್ದು, ಔಷಧಿ ಸೇವಿಸಿ ಅಸ್ವಸ್ಥರಾಗಿರುವ 5 ಮಂದಿಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದು ಬಂದಿದೆ.
ಇನ್ನು ಈ ಕುಟುಂಬದ 13 ಮಂದಿ ಹೋಮಿಯೊಪಥಿ ಔಷಧಿಯನ್ನು ಸೇವಿಸಿದ್ದು, ಇದರಲ್ಲಿ ಶೇ. 91 ರಷ್ಟು ಕಳ್ಳಭಟ್ಟಿ ಬೆರಸಲಾಗಿತ್ತು ಎಂದು ವರದಿಯಾಗಿದೆ.
ಔಷಧಿ ಸೇವಿಸಲು ನಿರ್ದೇಶಿಸಿದ್ದ ವೈದ್ಯರು ತಲೆ ಮರೆಸಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.