ನವದೆಹಲಿ, ಮೇ. 06 (DaijiworldNews/HR): ದೆಹಲಿಯಲ್ಲಿ ಆಕ್ಸಿಜನ್ ಅಗತ್ಯವಿರುವ ಕೊರೊನಾ ರೋಗಿಗಳಿಗೆ ಆಕ್ಸಿಜನ್ ಸಪೋರ್ಟ್ ಹೊಂದಿರುವ ಆಟೋ ಆಂಬುಲೆನ್ಸ್ ಸೇವೆಗೆ ಚಾಲನೆ ನೀಡಲಾಗಿದೆ.
ಟಿವೈಸಿಐಎ ಫೌಂಡೇಷನ್ ಸಹಯೋಗದಲ್ಲಿ ಆಮ್ ಆದ್ಮಿ ಪಕ್ಷದ ರಾಜ್ಯಸಭಾ ಸಂಸದ ಸಂಜಯ್ ಸಿಂಗ್ ಅವರು 10 ಆಟೋ ಆಂಬುಲೆನ್ಸ್ಗಳು ಸೇವೆಗೆ ಲಭ್ಯವಾಗುವಂತೆ ಮಾಡಿದ್ದು, ಆಟೋದಲ್ಲಿ ಆಕ್ಸಿಜನ್ ಸಿಲೆಂಡರ್ ಹಾಗೂ ಸ್ಯಾನಿಟೈಸರ್ ಗಳ ಸೌಲಭ್ಯಗಳು ಇರಲಿವೆ ಎಂದು ತಿಳಿದು ಬಂದಿದೆ.
"ಆಟೋ ಚಾಲಕರು ಪಿಪಿಇ ಕಿಟ್ಗಳನ್ನು ಧರಿಸಲಿದ್ದು, ಪ್ರಾರಂಭಿಕ ಹಂತದ ಕೊರೊನಾ ಲಕ್ಷಣಗಳನ್ನು ಹೊಂದಿರುವ ಆಕ್ಸಿಜನ್ ಮಟ್ಟ 85-90 ಕ್ಕೆ ಬಂದಿರುವ ರೋಗಿಗಳಿಗೆ ಸಮೀಪದ ಆಸ್ಪತ್ರೆಗಳಿಗೆ ತೆರಳುವುದಕ್ಕೆ ಆಟೋ ಆಂಬುಲೆನ್ಸ್ ಗಳು ಸಹಕಾರಿಯಾಗಲಿವೆ.
ಇನ್ನು 9818430043 - 011-41236614 ದೂರವಾಣಿ ಸಂಖ್ಯೆಯ ಮೂಲಕ ಆಟೋ ಆಂಬುಲೆನ್ಸ್ ಗಳನ್ನು ಬುಕ್ ಮಾಡಬಹುದಾಗಿದೆ.