ನವದೆಹಲಿ, ಮೇ. 06 (DaijiworldNews/HR): ಭಾರತದಿಂದ ನಿಷೇಧಕ್ಕೊಳಗಾಗಿದ್ದ ಪಬ್ಜಿ ಗೇಮ್ ಇದೀಗ ಬ್ಯಾಟಲ್ಗ್ರೌಂಡ್ ಮೊಬೈಲ್ ಇಂಡಿಯಾ ಎಂಬ ಹೊಸ ಹೆಸರಿನಲ್ಲಿ ಮರು ಪ್ರವೇಶಕ್ಕೆ ಸಿದ್ದಗೊಂಡಿದೆ ಎಂದು ತಿಳಿದು ಬಂದಿದೆ.
ಹೊಸ ನಾಮಕರಣನೊಂದಿಗೆ, ಮುಂದಿನ ಕೆಲವು ತಿಂಗಳುಗಳಲ್ಲಿ ಪಬ್ಜಿ ಮೊಬೈಲ್ ಇಂಡಿಯನ್ ವರ್ಶನ್ ಬಿಡುಗಡೆಯಾಗುವ ಸಾಧ್ಯತೆಯಿದ್ದು, ಸ್ಪೋರ್ಟ್ಸ್ ಕ್ರೀಡಾದ ವರದಿಯ ಪ್ರಕಾರ ಈ ವರ್ಷದ ಮೇ ಅಥವಾ ಜೂನ್ ತಿಂಗಳಲ್ಲಿ ಪಬ್ಜಿ ಮೊಬೈಲ್ ಇಂಡಿಯಾ ಬಿಡುಗಡೆಯಾಗುವ ಸಾಧ್ಯತೆಯಿದೆ ಎನ್ನಲಾಗಿದೆ.
ಇನ್ನು ಬ್ಯಾಟಲ್ ಗ್ರೌಂಡ್ಸ್ ಮೊಬೈಲ್ ಇಂಡಿಯಾ ಅಥವಾ ಪಬ್ಜಿ ಮೊಬೈಲ್ ಇಂಡಿಯಾ ಕಳೆದ ವಾರ ಮೇ ತಿಂಗಳಲ್ಲಿ ಪ್ರಾರಂಭವಾಗಬಹುದು ಎಂದು ಹಲವಾರು ವರದಿಗಳು ಬಹಿರಂಗಪಡಿಸಿತ್ತು, ಆದರೆ ಅದು ಕೇವಲ ಊಹಾಪೋಹ ಸುದ್ದಿಯಾಗಿದ್ದು, ಕಂಪನಿಯು ಬಿಡುಗಡೆ ದಿನಾಂಕಗಳನ್ನು ಅಧಿಕೃತವಾಗಿ ಪ್ರಕಟಿಸಲಿದೆ.