ನವದೆಹಲಿ, ಮೇ. 06 (DaijiworldNews/HR): ದೇಶದಲ್ಲಿ ಕೊರೊನಾ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದ್ದು, ಕಳೆದ 24 ಗಂಟೆಗಳಲ್ಲಿ 4,12,262 ಹೊಸ ಕೊರೊನಾ ಪ್ರಕರಣಗಳು ಧೃಡಪಟ್ಟಿದ್ದು, 3,980 ಮಂದಿ ಮೃತಪಟ್ಟಿದ್ದಾರೆ.
ಸಾಂಧರ್ಭಿಕ ಚಿತ್ರ
ಕೇಂದ್ರ ಆರೋಗ್ಯ ಸಚಿವಾಲಯದ ಪ್ರಕಾರ ಕಳೆದ 24 ಗಂಟೆಗಳಲ್ಲಿ 4,12,262ಯಲ್ಲಿ ಕೊರೊನಾ ಕಂಡುಬಂದಿದ್ದು, 3,980 ಮಂದಿ ಮೃತಪಟ್ಟಿದ್ದು, 1,72,80,844 ಮಂದಿ ಗುಣಮುಖರಾಗಿದ್ದಾರೆ.
ಇನ್ನು ದೇಶದಲ್ಲಿ ಒಟ್ಟು 2,10,77,410 ಕೊರೊನಾ ಪ್ರಕರಣಗಳು ಕಂಡುಬಂದಿದ್ದು, ಒಟ್ಟು 23,01,68 ಮಂದಿ ಸಾವಿನಪ್ಪಿದ್ದಾರೆ.
ದೇಶದಲ್ಲಿ ಇಲ್ಲಿಯವರೆಗೆ 1,72,80,844 ಮಂದಿ ಗುಣಮುಖರಾಗಿದ್ದು, 35,66,398 ಪ್ರಕರಣಗಳು ಸಕ್ರೀಯವಾಗಿದೆ.
ಇನ್ನು ಭಾರತದಲ್ಲಿ ಒಟ್ಟು 16,25,13,339 ಮಂದಿ ವ್ಯಾಕ್ಸಿನೇಷನ್ ತೆಗೆದುಕೊಂಡಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.