ಶ್ರೀನಗರ, ಮೇ.06 (DaijiworldNews/PY): ಜಮ್ಮು-ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿ ಗುರುವಾರ ನಡೆದ ಎನ್ಕೌಂಟರ್ನಲ್ಲಿ ಮೂವರು ಉಗ್ರರು ಹತರಾಗಿದ್ದು, ಓರ್ವ ಉಗ್ರ ಪೊಲೀಸರಿಗೆ ಶರಣಾಗಿದ್ದಾನೆ.
ಸಾಂದರ್ಭಿಕ ಚಿತ್ರ
ಪೊಲೀಸರಿಗೆ ಶರಣಾದ ಉಗ್ರನನ್ನು ತೌಸಿಫ್ ಅಹ್ಮದ್ ಎಂದು ಗುರುತಿಸಲಾಗಿದೆ.
ಕಂಗಿಗಾಮ್ ಪ್ರದೇಸದಲ್ಲಿ ಉಗ್ರರ ಇರುವ ಬಗ್ಗೆ ಪೊಲೀಸರಿಗೆ ಖಚಿತ ಮಾಹಿತಿ ದೊರಕಿದ್ದು, ಕಳೆದ ರಾತ್ರಿಯೇ ಕಂಗಿಗಾಮ್ ಜಿಲ್ಲೆಯನ್ನು ಸುತ್ತುವರೆದು ಶೋಧ ಕಾರ್ಯ ಪ್ರಾರಂಭಿಸಿದ್ದರು.
ಅಲ್-ಬದರ್ ಉಗ್ರಗಾಮಿ ಗುಂಪಿಗೆ ಹೊಸದಾಗಿ ನೇಮಕಗೊಂಡಿದ್ದ ಸ್ಥಳೀಯ ಉಗ್ರರ ಚಲನವಲನಗಳನ್ನು ಪೊಲೀಸರು ಗುರುತಿಸಿದ್ದು, ಬಂಧಿಸಿ ಶರಣಾಗುವಂತೆ ಮನವೊಲಿಸಲು ಪ್ರಯತ್ನಿಸಿದ್ದರು. ಉಗ್ರರು ಇದಕ್ಕೆ ನಿರಾಕರಿಸಿದ್ದು, ಭದ್ರತಾ ಪಡೆಗಳ ಮೇಲೆ ಗ್ರೆನೇಡ್ ದಾಳಿ ನಡೆಸಲು ಆರಂಭಿಸಿದರು. ಉಗ್ರರ ದಾಳಿಗೆ ಪೊಲೀಸರು ಗುಂಡು ಹಾರಿಸಿದಾಗ ಎನ್ಕೌಂಟರ್ ನಡೆದಿದೆ ಈ ಸಂದರ್ಭ ಓರ್ವ ಉಗ್ರ ಶರಣಾಗಿದ್ದು, ಮೂವರು ಪೊಲೀಸರಿಂದ ಹತರಾಗಿದ್ದಾರೆ.