ಬೆಂಗಳೂರು, ಮೇ 05 (DaijiworldNews/MS): ಬೆಡ್ ಬ್ಲಾಕಿಂಗ್ ಹಗರಣದ ಸಂಬಂಧ ಸಿಸಿಬಿ ತನಿಖೆ ಚುರುಕುಗೊಳಿಸಿದ್ದು, ಕೊರೊನಾ ಆಸ್ಪತ್ರೆಗಳಲ್ಲಿ ಹಾಸಿಗೆ ಹಂಚಿಕೆ ಅವ್ಯವಹಾರದಲ್ಲಿ ಭಾಗಿಯಾಗಿದ್ದ ಆರೋಪ ಎದುರಿಸುತ್ತಿರುವ ಒಟ್ಟು ಎಂಟು ಜನರನ್ನು ವಶಕ್ಕೆ ಪಡೆದಿದೆ.
ಮಂಗಳವಾರ ಸಂಜೆಯಷ್ಟೇ ಇಬ್ಬರನ್ನ ಜಯನಗರ ಪೊಲೀಸರು ಬಂಧಿಸಿದ್ದರು. ಇದರ ಬೆನ್ನಲ್ಲೇ ಇಂದು ಸಿಸಿಬಿ ಅಧಿಕಾರಿಗಳು ಇಬ್ಬರು ವೈದ್ಯರು ಸೇರಿ ಎಂಟು ಜನರನ್ನ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
" ಕೊರೊನಾ ಸೋಂಕಿತರಿಗಾಗಿ ಮೀಸಲಿಟ್ಟ ಹಾಸಿಗೆಗಳನ್ನು ಬಿಬಿಎಂಪಿ ಅಧಿಕಾರಿಗಳು ತಮಗೆ ಬೇಕಾದವರಿಗೆ ಬ್ಲಾಕ್ ಮಾಡುವ ಬ್ರಹ್ಮಾಂಡ ಹಗರಣ " ಸಂಸದ ತೇಜಸ್ವಿ ಸೂರ್ಯ, ಶಾಸಕ ಸತೀಶ್ರೆಡ್ಡಿ ಹಾಗೂ ತಂಡವೂ ಬಯಲಿಗೆಳೆದಿತ್ತು. ಇದರ ಬೆನ್ನಲ್ಲೇ ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ಪಂತ್ ಹೆಚ್ಚಿನ ತನಿಖೆಗಾಗಿ ಪ್ರಕರಣವನ್ನ ಸಿಸಿಬಿಗೆ ವರ್ಗಾಯಿಸಿದ್ದರು.
ನಿತ್ಯ ಹತ್ತಾರು ಸಾವಿರ ಸೋಂಕಿತರು ಒಂದೆಡೆ ಬೆಡ್ಗಳಿಲ್ಲದೇ ಒದ್ದಾಡಿ ಪ್ರಾಣಬಿಡುತ್ತಿದ್ರೆ, ಇತ್ತ ಬಿಬಿಎಂಪಿ ಅಧಿಕಾರಿಗಳು.. ತಮಗೆ ಬೇಕಾದವರಿಗೆ ಲಕ್ಷ ಲಕ್ಷ ದುಡ್ಡು ಕೊಟ್ಟವರಿಗೆ ಐಸಿಯು, ವೆಂಟಿಲೇಟರ್, ಆಕ್ಸಿಜನ್ ಬೆಡ್ಗಳನ್ನ ಬ್ಲಾಕ್ ಮಾಡಿಕೊಳ್ಳುದ್ದಾರೆ ಎಂದು ತೇಜಸ್ವಿ ಸೂರ್ಯ ಮತ್ತವರ ತಂಡ ಆರೋಪಿಸಿದ್ದರು.