ಬೆಂಗಳೂರು, ಮೇ 04 (DaijiworldNews/SM): ಮೇ 4 ರಂದು ಹೊಸ ಕರೋನವೈರಸ್ ಪ್ರಕರಣಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿವೆ. ರಾಜ್ಯ ಆರೋಗ್ಯ ಇಲಾಖೆ ಬಿಡುಗಡೆ ಮಾಡಿದ ಆರೋಗ್ಯ ಬುಲೆಟಿನ್ ಪ್ರಕಾರ, ರಾಜ್ಯದಲ್ಲಿ ಮಂಗಳವಾರದಂದು 44,631 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ಮಂಗಳವಾರ ಬೆಂಗಳೂರು ನಗರವೊಂದರಲ್ಲೇ 20,870 ಪ್ರಕರಣಗಳು ದಾಖಲಾಗಿವೆ.
ಕರೋನಾ ವೈರಸ್ನಿಂದಾಗಿ 292 ಮಂದಿ ಮಂಗಳವಾರ ಮೃತಪಟ್ಟಿದ್ದಾರೆ. ಬೆಂಗಳೂರು ನಗರದಲ್ಲಿ 132 ಸಾವುಗಳು ಸಂಭವಿಸಿದ್ದು, ಬಳ್ಳಾರಿ 27 ಪ್ರಕರಣಗಳು ದಾಖಲಾಗಿದೆ. ಇದರೊಂದಿಗೆ ಇದುವರೆಗಿನ ಸಾವಿನ ಸಂಖ್ಯೆ 16,538ಕ್ಕೆ ಏರಿಕೆಯಾಗಿದೆ.
ಮಂಗಳವಾರ 24,714 ಕ್ಕೂ ಹೆಚ್ಚು ಜನರನ್ನು ಆಸ್ಪತ್ರೆಗಳಿಂದ ಬಿಡುಗಡೆ ಮಾಡಲಾಗಿದ್ದು, ಇದುವರೆಗಿನ ಒಟ್ಟು ಚೇತರಿಕೆ ಪ್ರಕರಣಗಳು 12,10,013ಕ್ಕೆ ತಲುಪಿದೆ.
ಕರ್ನಾಟಕದಲ್ಲಿ ಇದುವರೆಗೆ 16,90,934 ಸಕಾರಾತ್ಮಕ ಪ್ರಕರಣಗಳು ಕಂಡುಬಂದಿವೆ. ರಾಜ್ಯದಲ್ಲಿ ಪ್ರಸ್ತುತ 4,64,363 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ದಿನದ ಸಕಾರಾತ್ಮಕ ದರವು 29.03% ರಷ್ಟಿದ್ದರೆ, ದಿನದ ಸಾವಿನ ಪ್ರಮಾಣ 0.65% ಆಗಿದೆ. ಸೋಮವಾರ ಮತ್ತು ಮಂಗಳವಾರ ನಡುವೆ ಒಟ್ಟು 1,53,707 ಮಾದರಿಗಳನ್ನು ಪರೀಕ್ಷಿಸಲಾಯಿತು.
ರಾಜ್ಯದಲ್ಲಿ ಈವರೆಗೆ 99,36,048 ಜನರಿಗೆ ಲಸಿಕೆ ನೀಡಲಾಗಿದೆ.