ನವದೆಹಲಿ, ಮೇ 04 (DaijiworldNews/MB) : ಇತ್ತೀಚೆಗೆ ಬರೀ ವಿವಾದಗಳಿಂದಲ್ಲೇ ಸುದ್ದಿ ಆಗುತ್ತಿರುವ ಬಾಲಿವುಡ್ ಕ್ವೀನ್, ನಟಿ ಕಂಗನಾ ರಣಾವತ್ ಟ್ವೀಟರ್ ಖಾತೆಯನ್ನು ಟ್ವಿಟರ್ ಅಮಾನತು ಮಾಡಿದೆ.
ಈ ಹಿಂದೆಯೂ ನಿಯಮ ಉಲ್ಲಂಘನೆ ಆರೋಪದಲ್ಲಿ ತಾತ್ಕಾಲಿಕವಾಗಿ ಕಂಗನಾ ಟ್ವೀಟರ್ ಖಾತೆಯನ್ನು ಅಮಾನತು ಮಾಡಲಾಗಿತ್ತು.ಈಗ ನಿಯಮ ಉಲ್ಲಂಘನೆ ಆರೋಪದಲ್ಲಿ ಕಂಗನಾ ರಣಾವತ್ ಖಾತೆಯನ್ನು ಶಾಶ್ವತವಾಗಿ ಟ್ವೀಟರ್ ಅಮಾನತುಗೊಳಿಸಿದೆ.
ಕಂಗನಾ ರಣಾವತ್ ಚುನಾವಣಾ ಫಲಿತಾಂಶಗಳ ಬಳಿಕ ಪಶ್ಚಿಮ ಬಂಗಾಳದಲ್ಲಿ ನಡೆದ ಹಿಂಸಾಚಾರದ ಬಗ್ಗೆ ಸರಣಿ ಟ್ವೀಟ್ಗಳ ಮೂಲಕ ಕೆಲವು ವಿವಾದಾದ್ಮಕ ಹೇಳಿಕೆ ನೀಡಿದ್ದರು. ಹಾಗೆಯೇ ನಟ ಸೋನು ಸೂದ್ ವಿರುದ್ದ ಮಾಡಲಾಗಿದ್ದ ಟ್ವೀಟ್ಗೆ ಲೈಕ್ ನೀಡುವ ಮೂಲಕ ಸೋನು ಸೂದ್ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದರು.
ಸುಶಾಂತ್ ಸಾವನ್ನು ಕೊಲೆ ಎಂದು ಹೇಳುವ ಮೂಲಕ ಬಾಲಿವುಡ್ನಲ್ಲಿ ಸಂಚಲನವನ್ನೇ ಸೃಷ್ಟಿ ಮಾಡಿದ್ದ ಕಂಗನಾ ಹಲವಾರು ನಿರ್ಮಾಪಕರು, ನಿರ್ದೇಶಕರು ನಟರ ವಿರುದ್ದ ವಾಗ್ದಾಳಿ ನಡೆಸಿದ್ದರು. ಆದರೆ ಇತ್ತೀಚೆಗೆ ಟ್ವೀಟ್ ಒಂದರಲ್ಲಿ ಸುಶಾಂತ್ ಆತ್ಮಹತ್ಯೆ ಎಂದು ಉಲ್ಲೇಖ ಮಾಡುವ ಮೂಲಕ ಭಾರೀ ಟ್ರೋಲ್ಗೆ ಒಳಗಾಗಿದ್ದರು.