ನವದೆಹಲಿ, ಮೇ.04 (DaijiworldNews/HR): ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಇಂದು ವರ್ಚುವಲ್ ಶೃಂಗಸಭೆ ನಡೆಸಲಿದ್ದಾರೆ ಎಂದು ತಿಳಿದು ಬಂದಿದೆ.
ಈ ಕುರಿತು ಮಾಹಿತಿ ನೀಡಿರುವ ವಿದೇಶಾಂಗ ಸಚಿವಾಲಯ, "ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ವರ್ಚುವಲ್ ಶೃಂಗಸಭೆ ಬಹುಮುಖಿ ಕಾರ್ಯತಂತ್ರದ ಸಂಬಂಧಗಳನ್ನು ಹೆಚ್ಚಿಸಲು ಮತ್ತು ಪರಸ್ಪರ ಪ್ರಾದೇಶಿಕ ಮತ್ತು ಜಾಗತಿಕ ವಿಷಯಗಳ ಬಗ್ಗೆ ಸಹಕಾರ ಹೆಚ್ಚಿಸಲು ಇದು ಒಂದು ಪ್ರಮುಖ ಅವಕಾಶವಾಗಿದೆ" ಎಂದು ಹೇಳಿದೆ.
ಇನ್ನು ಶೃಂಗಸಭೆಯ ಸಂದರ್ಭದಲ್ಲಿ ಸಮಗ್ರ ಮಾರ್ಗಸೂಚಿ 2030 ಅನ್ನು ಪ್ರಾರಂಭಿಸಲಾಗುವುದು, ಇದು ಮುಂದಿನ ದಶಕದಲ್ಲಿ ಐದು ಪ್ರಮುಖ ಕ್ಷೇತ್ರಗಳಾದ ಜನರ ನಡುವಿನ ಸಂಬಂಧ, ವ್ಯಾಪಾರ ಮತ್ತು ಸಮೃದ್ಧಿ, ರಕ್ಷಣೆ ಮತ್ತು ಭದ್ರತೆ, ಭಾರತ-ಯುಕೆ ಸಹಕಾರವನ್ನು ಮತ್ತಷ್ಟು ವಿಸ್ತರಿಸಲು ದಾರಿ ಮಾಡಿಕೊಡುತ್ತದೆ" ಎಂದು ಎಂಇಎ ಪ್ರಕಟಣೆ ತಿಳಿಸಿದೆ.