ನವದೆಹಲಿ, ಮೇ.04 (DaijiworldNews/HR): ಅಮೆರಿಕಾದಿಂದ ಭಾರತಕ್ಕೆ ಐದನೇ ಬ್ಯಾಚ್ನ 545 ಆಕ್ಸಿಜನ್ ಕಾನ್ಸಂಟ್ರೇಟರ್ಗಳು ಮಂಗಳವಾರ ಬಂದು ತಲುಪಿದೆ.
ಈ ಕುರಿತು ವಿದೇಶಾಂಗ ಸಚಿವಾಲಯದ ವಕ್ತಾರರಾದ ಅರಿಂದಮ್ ಬಾಗ್ಚಿ ಟ್ವೀಟ್ ಮಾಡಿ ಮಾಹಿತಿ ನೀಡಿದ್ದು, "ಅಮೇರಿಕಾದಿಂದ 5ನೇ ಹಂತದ ವೈದ್ಯಕೀಯ ಉಪಕರಣಗಳು ಬಂದಿದ್ದು, 545 ಆಕ್ಸಿಜನ್ ಕಾನ್ಸಂಟ್ರೇಟರ್ ಮಂಗಳವಾರ ಆಗಮಿಸಿದೆ" ಎಂದು ತಿಳಿಸಿದ್ದಾರೆ.
ಅಮೇರಿಕಾದಿಂದ ಭಾರತಕ್ಕೆ ಶನಿವಾರ 1000 ಆಕ್ಸಿಜನ್ ಸಿಲಿಂಡರ್, ಇತರ ವೈದ್ಯಕೀಯ ಉಪಕರಣಗಳನ್ನು ಹೊತ್ತ ವಿಮಾನ ಆಗಮಿಸಿದ್ದು, ರವಿವಾರ 1.25 ಲಕ್ಷ ರೆಮಿಡಿಸಿವಿರ್ ಲಸಿಕೆ ಹೊತ್ತ ವಿಮಾನ ಭಾರತಕ್ಕೆ ಬಂದಿತ್ತು.
ಇನ್ನು ಭಾರತಕ್ಕೆ ವೈದ್ಯಕೀಯ ಸಲಕರಣೆಗಳನ್ನು ಹೊತ್ತು ಸಾಗಬೇಕಿರುವ ಎರಡು ವಿಮಾನಗಳು ತಾಂತ್ರಿಕ ಕಾರಣದಿಂದ ತಡವಾಗಿದ್ದು, ಬುಧವಾರ ದೇಶವನ್ನು ತಲುಪುವ ನಿರೀಕ್ಷೆ ಇದೆ ಎಂದು ಅಮೇರಿಕಾದ ರಕ್ಷಣಾ ಇಲಾಖೆ ತಿಳಿಸಿದೆ.